CUSTOM SEARCH

ಭಾರತೀಯ ಸಂವಿಧಾನ - ಕನ್ನಡದಲ್ಲಿ - INDIAN CONSTITUTION IN KANNADA - ಕರ್ನಾಟಕ ಸರ್ಕಾರದ ಕೊಡುಗೆ

CONSTITUTION OF INDIA IN KANNADA LANGUAGE

ಕಾನೂನು ವಿಚಾರದ ಬಗ್ಗೆ ಪ್ರಕಟಣೆಯನ್ನು ಈ ಪ್ರಕಟಣೆ ಮಧ್ಯವರ್ಥಿಗಳು ಏಕೆ ಬಯಸುವುದಿಲ್ಲ

ನನಗೆ ರಾಜಕೀಯ ಶಕ್ತಿಗಳಿಂದ ಪತ್ರಿಕೆಯಲ್ಲಿ ಪ್ರಕಟವಾಗುವ ಬರಹಗಳಿಗೆ ಅಡ್ಡಿಯಾಯಿತು ಅದರೆ ಅದು ಅಂತರ್ಜಾಲದ ಸಂಪದ ಮತ್ತು ವಿಕಿಪೀಡಿಯಾಗೂ ಆವರಿಸಿದೆ ಎಂದರೆ ಸಂಪದಿಗ ನಾಡಿಗ್ ರವರ ಕಾರ್ಯ ನಾವು ಮೆಚ್ಚಬೇಕೆ, ಅವರ ರಾಜಕೀಯ ಹೊಂದಾಣಿಕೆ ಮೆಚ್ಬೇಕೆ ಬರಹಗಾರನ ಸ್ವಾತಂತ್ರವಿಲ್ಲದ ಪ್ರಕಟಣಾ ತಾಣವನ್ನು ಮೆಚ್ಚಬೇಕೆ ಎಲ್ಲವೂ ಅಯೋಮಯವಾಗಿದೆ. ಅದು ಪ್ರಜಾಪ್ರಭುತ್ವ ವಾಧಿಗಳ ತಾಣವಲ್ಲ ಎಂಬುದು ನನ್ನ ಅನಿಸಿಕೆ
WHY WIKIPEDIA ASSOCIATE SUPPRESSES MY PUBLICATION IS IT ZEALOUS OR BAD POLITICS

ಸಮಾಜ ಸೇವೆ ಬಗ್ಗೆ ಮನಸ್ಸು ನಾನೇನು ಮಾಡಲಿ ಬಡವನಯ್ಯ ಎಂದು ಕೈ ಚೆಲ್ಲಿದಾಗ


ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಮುಖ ಹೊತ್ತ ಅನೇಕರು ತಮ್ಮ ಸ್ವಾರ್ಥ ಸಾದನೆಯಲ್ಲಿ ನಿರತರಾಗಿರುವುದನ್ನು ಕಂಡಾಗ ಎಲ್ಲಿ ಬಂದು ನಿಂತೆವಯ್ಯ ಇವೆಲ್ಲಾ ಕಾಣಲಿಕ್ಕೆ ನಮ್ಮಲ್ಲಿ ಪ್ರಾಮಾಣಿಕತೆಯನ್ನು ಬದುಕಿಸಿರುವೆಯಾ. ಪ್ರಾಮಾಣಿಕರು ನಾವು ಎಂದರೆ ಸಂಶಯದಿ ಕಿರುನಗೆಯ ಬೀರುವ ಸಮಾಜದಲ್ಲಿ ತಂದು ಕುಳ್ಳಿರಿಸಿದೆಯಾ, ಹೇ ಪ್ರಭುವೇ ಎಂದು ಅನೇಕ ಬಾರಿ ನಮ್ಮನ್ನು ನಾವು ನಂಬಿದ ಪ್ರಭುವನ್ನು ಜರಿದದ್ದು ಉಂಟು.

ಏಕೆ ಹೀಗೆ, ನಾವು ಮತ್ತು ನಮ್ಮ ನಿಷ್ಟೆ ಸಮಾಜಕ್ಕೆ ಬೇಡವೆ, ಎಲ್ಲರಂತಿಲ್ಲದ ನಾವು ಸಮಾಜದ ಕಣ್ಣಲ್ಲಿ ಅಘೋರಿಗಳಾದೆವೆ. ಅಂತಹ ಸಂಶಯದ ಕಣ್ಣಿನ ನೋಟಕ್ಕೆ ಗುರಿಯಾದ ನಮಗೂ ಏಕಪ್ಪ ಬೇಕು ಈ ಸೇವೆ ಎಂದು ಅನಿಸಿದ್ದು ನಿಜ, ಆದರೆ ಅದೇ ಸೇವೆಯ ಹೆಸರಲ್ಲಿ ಮೋಸಕ್ಕೆ ಇಳಿಯಲು ಎಂದೂ ಮನಸ್ಸು ಮಾಡಿದವರಲ್ಲ, ಎಂಬ ಸತ್ಯ ಯಾರಿಗೆ ಹೇಳಿ ಮೆಚ್ಚಿಸಬೇಕು. ನಾವು ಒಳ್ಳೆಯವರೋ ಕೆಟ್ಟವರೋ ಎಂದು ಇಂದಿಗೂ ಅರ್ಥವಾಗುತ್ತಿಲ್ಲಾ, ಒಬ್ಬ ಸಹಪಾಠಿ ಹೇಳುತ್ತಾನೆ. ಸಾರ್ ನಿತ್ಯ ಸುಮಂಗಲಿ ಅವಳ ನೇರಕ್ಕೆ ಒಟ್ಟೆ ಪಾಡಿಗಾಗಿ ಅವಳು ಮಾಡಿದ್ದು ಸರಿ ಅನ್ನುತ್ತಾಳೆ, ಅವಳಿಗೆ ನನ್ನಲ್ಲಿರುವ ಖಾಯಿಲೆ ಇತರರಿಗೆ ಹರಡದಂತೆ ಕಾಂಡೋಮನ್ನು ಬಳೆಕೆ ಮಾಡಿ ನನ್ನ ಪ್ರಾಮಾಣಿಕತೆ ಮೆರೆದೆ ಎಂದು ತನ್ನ ಕೆಲಸದ ಬಗ್ಗೆ ಆಕೆ ಪ್ರತಿ ದಿನವೂ ಸಂತೋಷ ಪಡುತ್ತಾಳೆ. ಸಮಾಜ ಸುದಾರಕನೊಬ್ಬ ಆಕೆಯ ಸ್ಟೋರಿಯನ್ನು ಎಲ್ಲರಿಗೂ ತಿಳಿಯುವಂತೆ ಕನಿಕರ ಬರುವಂತೆ ಮಾಡಿ ಚಿತ್ರಣ ಮಾಡಿ ನಾನು ಸಮಾಜ ಸೇವಾ ದುರೀಣ ಎಂದು ಬಿರುದು ಪಡೆಯುವವರು ಸಮಾಜ ಸೇವಕರೆ. ಆದರೆ ಇಲ್ಲಿ ಸಮಾಜ ಸೇವೆಯನ್ನು ಬಹಳ ಗೌಣವಾಗಿ ಮಾಡಿದವರು ಆ ನಿತ್ಯ ಸುಮಂಗಲಿ, ಯಾಕೆ ಗೊತ್ತೆ ಆಕೆ ಸಮಾಜದ ವಿಕೃತಿಗಳನ್ನು ತಣಿಸಿ ಉತ್ತಮ ಹಾದಿಗೆ ಜನರನ್ನು ಬಿಡುತ್ತಿರುವ ಸಮಾಜ ಸೇವೆ ಒಂದೆಡೆಯಾದರೆ, ಆಕೆ ಗಂಡು ಸಂತತಿಯ ವಿಕೃತ ಬಾವನೆಗಳಿಗೆ ಬ್ರೇಕ್ ಇನ್ಸ್ ಪೆಕ್ಟರ್ ಸೇವೆಯನ್ನೂ ಮಾಡುತ್ತಾಳೆ. ಅಂತಹ ಸ್ಟೋರಿಗಳನ್ನು ನೋಡಿದ ಇನ್ನೂ ಅರ್ಥವಾಗದ ವಯಸ್ಸಿನಲ್ಲಿರುವ ಯುವಕ ಅದನ್ನು ನೋಡಿ ಗೊಂದಲಕ್ಕೆ ಈಡಾದ ಹಾಗೆ ಆಗಿದೆ ನೋಡಿ ನಿಮ್ಮ ಬದುಕು, ನೀವು ಇನ್ನು ಬೇಜಾನು ಕಲೀಬೇಕು ಸಾರ್ ಅಂತಾನೆ.

ಅಲ್ರೀ ನಾನು ಸಮಾಜ ಸೇವೆಯ ಬಗ್ಗೆ ಮಾತನಾಡುವಾಗ್ಗೆ ಈ ಹೋಲಿಕೆ ಏಕೆ ಎಂದು ಒಮ್ಮೆ ಆಲೋಚಿಸಿದಾಗ ಅಹುದು ನಿತ್ಯಸುಮಂಗಲಿಗೆ ತಾನು ಮಾಡಿದ್ದು ಅವಳ ಪರಿಸರಕ್ಕೆ ಸರಿ ಅನಿಸಿದ ಹಾಗೆಯೇ ನಾನು ಯಾರನ್ನು ತಪ್ಪು ಮಾಡುತ್ತಿದ್ದಾರೆ ಎಂದು ಬಾವಿಸಿರುವೆನೋ ಅವರು ಅವರ ನೇರಕ್ಕೆ ಸರಿ ಮಾಡುತ್ತಿದ್ದಾರೆ. ಅವರ ಧರ್ಮಕ್ಕೆ ಅದು ಸರಿ, ಅದನ್ನು ಅಸಹ್ಯ ಮಾಡಿಕೊಳ್ಳಲು ಮತ್ತು ಬೆಟ್ಟು ಮಾಡಿ ತೋರಲು ನನಗೆ ಅಧಿಕಾರವುಂಟೆ. ಸ್ವಾರ್ಥತೆ ಇಲ್ಲದ ನನ್ನ ಬದುಕು ಹೀಗೆ ಹಸನಾಗಿ ಇರಬಲ್ಲುದೆ, ಮನುಜನು ಸ್ವಾರ್ಥತೆ ಇಲ್ಲದೆ ಜೀವನ ನಡೆಸಬಲ್ಲನೆ, ಯಾವುದನ್ನು ಸತ್ಯಾ ಎಂದು ನಂಬಿ ಅದು ಸುಳ್ಳು ಎಂದು ತಿಳಿದಾಗ ಆಕಾಶವೇ ಕಳಚಿ ಬಿದ್ದಂತಾ ಮನಸ್ಥಿತಿ ತಲುಪುವುದಕ್ಕಿಂತಾ ನಾವು ಇರುವುದೇ ಒಂದು ಸುಳ್ಳಿನಾ ಲೋಕ ಇಲ್ಲಿ ಸತ್ಯವೂ ಇಲ್ಲ ಪ್ರಾಮಾಣಿಕತೆಯೂ ಇಲ್ಲ, ನಮ್ಮ ಮನಸಿಗೆ ನೆಮ್ಮದಿ ನೀಡುವುದನ್ನು, ನಮಗೆ ಸರಿ ಎಂದು ತೋಚಿದ್ದನ್ನು, ನಮ್ಮ ಪ್ರಾಮಾಣಿಕತೆಯನ್ನು ಬೇರೆಯವರಿಂದ ಬಯಸದೆ, ನಾವು ನಮ್ಮ ಕರ್ಮವನ್ನು ಮಾಡೋಣ, ನಮ್ಮ ಮನಸಿಗೆ ನೋವುಂಟು ಮಾಡದೆ ಈ ಸಮಾಜ ಸ್ಪಂದಿಸದು ಎಂಬ ತಿಳುವಳಿಕೆಯಲ್ಲಿಯೇ ನಾವಿರೋಣ, ನಮ್ಮ ಮನಸ್ಸು ಸಮಾಜಕ್ಕೆ ಅರ್ಥವಾಗದು, ಸಮಾಜದ ಮನಸ್ಥಿತಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ನಾನು ಬದಲಾದರೆ ಎಲ್ಲವೂ ಸರಿ ಹೊಂದಬಹುದೆ ಎಂದು ಮನಸ್ಸನ್ನು ಕೇಳಿದರೆ, ಪ್ರಶ್ನೆಯೂ ನಿನ್ನದೆ ಉತ್ತರವೂ ನಿನ್ನದೆ ನಾನೇನು ಮಾಡಲಿ ಬಡವನಯ್ಯ ಎನ್ನಬೇಕೆ.

ಅಂತಹ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡವರೇ ಮಾನಸಿಕ ಶಾಸ್ತ್ರಜ್ಞರು, ಇವರು ಹೇಳುವುದೇನೆಂದರೆ ನಾವು ನಮ್ಮ ಜೀವನಾಧಾರಕ್ಕೆನಂಬಿಕೊಂಡಿರುವ ವ್ಯಕ್ತಿ ಮತ್ತು ಸಂಸ್ಥೆಗಳು ನಮ್ಮನ್ನು ದುರುಪಯೋಗ ಪಡಿಸಿಕೊಂಡರೆ, ನಾವು ಏನನ್ನು ಮಾಡಿದರೆ ತಪ್ಪು ಎಂಬ ನಂಬಿಕೆಯಲ್ಲಿರುವುದನ್ನು ನಮ್ಮಿಂದ ಮಾಡಿಸಿದರೆ/ನಮ್ಮ ಮೇಲೆ ಅಂತಹ ಕೃತ್ಯಗಳು ಅವರಿಂದ ನಡೆದರೆ ಅದು ಬಿಟ್ರೇಯಲ್ (ನಂಬಿಕೆ ದ್ರೋಹ). ನಂಬಿಕೆ ದ್ರೋಹಕ್ಕೆ ಒಳಗಾಗಿರುವ ವ್ಯಕ್ತಿಯ ಮನಸ್ಥಿತಿ ಯಾವ ಮಟ್ಟದಲ್ಲಿ ನೋವನ್ನು ಗೊಂದಲವನ್ನು ಅನುಭವಿಸುತ್ತದೆ ಎಂದರೆ, ಮನೆಯಲ್ಲಿ ತಂದೆಯೇ ತನ್ನ ಮಗಳ ಮೇಲೆ ಕಾಮ ಪ್ರಜ್ಞೆಯನ್ನು ಭೀರಿ ಲೈಂಗಿಕ ಕಿರುಕುಳಕ್ಕೆ ಒಳಗಾದ ವ್ಯಕ್ತಿಗಳು ಯಾವ ರೀತಿಯಲ್ಲಿ ಮನಸ್ಥಿತಿಯಲ್ಲಿ ಇರುತ್ತಾರೋ ಅಂತಹ ಸ್ಥಿತಿಗೆ ಈ ನಂಬಿಕೆ ದ್ರೋಹಕ್ಕೆ ಒಳಗಾದ ವ್ಯಕ್ತಿಗಳು ಬಂದು ನಿಲ್ಲುತ್ತಾರೆ ಎಂದು ಮಾನಸಿಕ ಶಾಸ್ತ್ರಜ್ಞೆ ಜೆನಿಫರ್ ಫ್ರೇಡ್ ಹೇಳುತ್ತಾರೆ.

ಯಾರಿಂದ ನಮ್ಮ ಜೀವನುವು ಸಂತೋಷಮಯವಾಗುವುದೋ, ಉದ್ದಾರವಾಗುವುದೋ, ನೆಲೆಯನ್ನು ಕಾಣುವುದೋ, ಪ್ರೋತ್ಸಾಹವು ದೊರಕುವುದೋ, ರಕ್ಷಣೆ ದೊರೆಯುವುದೋ, ಭದ್ರತೆ ಇರುವುದೋ ಎಂದು ನಂಬಿದ ವ್ಯಕ್ತಿಗೆ ಅಂತಹ ವ್ಯಕ್ತಿ/ಸಂಸ್ಥೆಯಿಂದ ನಂಬಿಕೆ ದ್ರೋಹವಾಗಿ ಲೈಂಗಿಕ ಕಿರುಕುಳ/ ವೈರಿಗಳ ಸಖ್ಯ/ ದಮನಕಾರಿ ನಡವಳಿಕೆ/ ಪ್ರೋತ್ಸಾಹಿಸದೆ ಖಿನ್ನತೆಗೆ ದೂಡುವುದು/ ಮಾತು ಮಾತಿನಲ್ಲಿಯೂ ಪಾಪ ಪ್ರಜ್ಞೆಗೆ ದೂಡುವುದು/ ಬ್ಲಾಕ್ ಮೇಲ್ ತಂತ್ರಗಾರಿಕೆ ಮಾಡುವುದು/ ವೈರಿಗಳಿಂದ ಸುಫಾರಿ ಪಡೆದು ಬೆಳವಣಿಗೆಯನ್ನು ಮಟ್ಟಹಾಕುವುದು/ ವಿದ್ವತ್ತನ್ನು ಬೆಳಕಿಗೆ ಬಿಡದಂತೆ ತಪ್ಪು ಗಾಸಿಫ್ ಬೆಳಸುವುದು/ ಉತ್ತಮವಾದ ಕೆಲಸಗಳಿಂದ ದೂರವಿಡಲು ನಿರುಪಯುಕ್ತ ಕಾರ್ಯದ ಎಡೆ ಕೊಂಡೊಯ್ಯುವುದು/ ಹೀಗೆ ಹತ್ತು ಹಲವು ನಂಬಿಕೆ ದ್ರೋಹದ ಲಹರಿಗೆ ಗುರಿಯಾಗುವ ಮನುಜನ ಸ್ಥಿತಿ ಮಾನಭಂಗಕ್ಕೆ ಒಳಗಾದ ಸ್ತ್ರೀ ಮತ್ತು ಮಕ್ಕಳ ಮನಸ್ಥಿತಿಯಂತೆ ಆಗುತ್ತದೆ ಎಂದು ಮನಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ರಾಜಕೀಯದವರು ಆಡುವ ಈ ಆಟಗಳಲ್ಲಿ ಎಸ್ಟು ಜನರು ಬೇಸತ್ತು ನಮಗೆ ಅಲ್ಲ ಈ ಕ್ಷೇತ್ರ ಎಂದು ಸುಮ್ಮನಾದವರು ಅನೇಕರು ಒಂದೆಡೆಯಾದರೆ, ಸಮಾಜ ಸೇವೆಯ ಹೆಸರಲ್ಲಿ ಬಡವ ಬಲ್ಲಿದರ ಪರ ನಿಂತು ಹೋರಾಡುವುದಾಗಿ ಹುಟ್ಟಿಕೊಂಡ ಸಂಘ ಸಂಸ್ಥೆಗಳು, ಸತ್ಯದಲ್ಲಿ ಅವರ ಪರ ಇಲ್ಲ, ಇವರೆಲ್ಲಾ ಡೋಂಗಿ ಪಟಾಲಮ್ಮುಗಳು ಎಂದು ಅರ್ಥಮಾಡಿಕೊಂಡ ಸತ್ಯವಂತನಿಗೂ ಇಂತಹದ್ದೇ ನಂಬಿಕೆ ದ್ರೋಹವಾಗಿರುತ್ತೆ. ಇಲ್ಲಿ ವ್ಯತ್ಯಾಸವೊಂದೆ ಸತ್ಯದ ಹಾದಿಯಲ್ಲಿ ಈ ವ್ಯಕ್ತಿತ್ವಕ್ಕೆ ಅತ್ಯಾಚಾರವಾಗಿರುತ್ತೆ.

ಇಂತಹ ವಿಶ್ವಾಸ ಘಾತುಕತನವನ್ನು ಹೇಗೆ ನಿಭಾಯಿಸುವುದು, ಮೊದಲಿಗೆ ನಿಮಗೆ ವಿಶ್ವಾಸ ಘಾತವಾಗಿದೆ ಎಂಬುದನ್ನು ನೀವೇ ಒಪ್ಪಿಕೊಳ್ಳಿ, ದ್ವಂದ್ವದಲ್ಲಿ ಇರಬೇಡಿ, ನಾನು ತಪ್ಪು ಮಾಡಿದ್ದೇನೆ ಎಂಬ ಖಿನ್ನತೆಯಿಂದ ಹೊರಬನ್ನಿ, ತಮ್ಮ ಆಪ್ತರು ಅಥವ ಡೈರಿಯಲ್ಲಿ ತಮ್ಮ ಮನಸ್ಸಿನಲ್ಲಿ ಇರುವ ಬಾವನೆಗಳನ್ನು ಹೇಳಿಕೊಳ್ಳಿ, ಒಳ್ಳೆಯ ಆಲೋಚನೆಯಲ್ಲಿರಿ, ದೇವರಲ್ಲಿ ನಿಮಗೆ ಮೋಸ ಮಾಡಿದವರಿಗೆ ಒಳ್ಳೆಯ ಬುದ್ದಿಯನ್ನು ದಯಪಾಲಿಸು ಎಂದು ಕೇಳಿರಿ, ಕೆಲವು ವ್ಯಕ್ತಿಗಳ ಸಹವಾಸವನ್ನು ನೇರವಾಗಿ ಕಡಿವಾಣ ಗೊಳಿಸಿ, ಅಳಬೇಕೆನಿಸಿದರೆ ಬಹಳ ಜೋರಾಗಿ ಏಕಾಂಗಿಯಾಗಿ ಅತ್ತು ಬಿಡಿ ಮನಸ್ಸಿನಲ್ಲಿರುವ ದುಗುಡ ಕಮ್ಮಿಯಾಗುವುದು, ಅನ್ಯ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ, ಸ್ವಲ್ಪ ಸಮಯ ಹಿಡಿಯಬಹುದು ನೀವು ಮತ್ತು ನಿಮ್ಮ ಪರಿಸರ ನೀವು ಪ್ರೀತಿಸುವಂತೆಯೇ ಇರುತ್ತದೆ, ಯಾವುದಕ್ಕೂ ದೃತಿ ಕೆಡಬೇಡಿ, ಪ್ರಪಂಚವೇ ಕೊನೆಯಾಗಿ ಹೋಯಿತು ಎಂಬ ಬಾವನೆ ಬೇಡ ಎಂದು ಮನಶಾಸ್ತ್ರಜ್ಞರ ಅನ್ಲೈನ್ ಬರಹವನ್ನು ಓದಿದಾಗ ಮನಸ್ಸು ಹಾಗೆ ಮಾಡಬೇಕೆಂದು ಹಂಬಲಿಸಿತು, ಕೊನೆಗೆ ಆ ಮನಸ್ಸು ನಾನೇನು ಮಾಡಲಿ ಬಡವನಯ್ಯ ಎಂದುದ್ದಕ್ಕೆ ಪಶ್ಚಾತಾಪ ಪಟ್ಟಿತು. ಜಗತ್ತಿನಲ್ಲಿ ಯಾರು ಮೋಸಕ್ಕೆ ಒಳಗಾಗಿಲ್ಲ ಮಲ್ಲಪ್ಪ ಶೆಟ್ಟಿಯಿಂದ ಮೋಸ ಹೋದ ಕಿತ್ತೂರು ರಾಣಿ ಚೆನ್ನಮ್ಮ ಳಿಲ್ಲವೆ, ರಾಜಾನು ರಾಜರನ್ನು ಮೋಸಗೊಳಿಸಿದ ಚರಿತ್ರೆಯನ್ನು ನಾವು ಕೇಳಿಲ್ಲವೆ, ಇಲ್ಲಿ ಮೋಸಮಾಡಿದವರನ್ನು ಉತ್ತಮ ಮಾತುಗಳಿಂದ ನೆನೆಯಲಾರರು, ಮೋಸಕ್ಕೆ ಒಳಗಾದವರ ಚರಿತ್ರೆ ನಮ್ಮನ್ನು ಮತ್ತೆ ಮತ್ತೆ ತಟ್ಟಿ ಎಬ್ಬಿಸುತ್ತಿದೆ.

ಮತ್ತೊಮ್ಮೆ ಮೋಸ ಹೋಗದಿರಿ, ನಿಮಗೆ ಮೋಸಮಾಡಿರುವವರ ಬಗ್ಗೆ ಪೂರ್ಣ ತಿಳಿದು ಅವರು ಮಾಡಿರುವ ಕೆಲಸವೇನು ಎಂದು ತಿಳಿದು ಅವರಿಗೆ ತಿದ್ದಿಕೊಳ್ಳಲು ಅವಕಾಶ ನೀಡಿ, ಅದಕ್ಕೆ ಅವರು ಅರ್ಹರೆ ಎಂಬುದನ್ನು ಮೊದಲಿಗೆ ನಿರ್ದರಿಸಿ. ಎಲ್ಲವೂ ನಿಮ್ಮಂತೆ ನಿಮ್ಮ ಪ್ರಾಮಾಣಿಕತೆಯ ಹಾದಿಯನ್ನು ಹಿಡಿಯುತ್ತದೆ. ಸತ್ಯಕ್ಕೆ ಜಯವಿದೆ, ಪ್ರಾಮಾಣಿಕತೆಗೆ ಬೆಲೆ ಇದೆ ಯಾವುದೇ ಜಿಗುಪ್ಸೆಗಳು ಉಂಟಾಗಲಿ ಅವುಗಳನ್ನು ಹಿಮ್ಮೆಟ್ಟಿ ಮುನ್ನಡೆಯಿರಿ ನಿಮ್ಮ ಸಾದನೆ ಎಂದೆಂದಿಗೂ ಶುಭವನ್ನು ತಂದು ನಿಮ್ಮ ಬಾಳು ಬಂಗಾರವಾಗುತ್ತದೆ.

ವಿದ್ಯೆ ಯಾರ ಅಪ್ಪನ ಸ್ವತ್ತು ಅಲ್ಲ, ಅದನ್ನು ಕಲಿಯದಂತೆ ತಡೆಯಲು ಸಾದ್ಯವಿಲ್ಲ, ಕಟ್ಟಿಹಾಕಲು ಸಾದ್ಯವಿಲ್ಲ ತಡೆ ಗೋಡೆ ನಿರ್ಮಾಣವೂ ಸಾದ್ಯವಿಲ್ಲ

ಕೆಲವರು ನನ್ನ ಪತ್ರಿಕಾ ಬರಹಗಳನ್ನು ಹತ್ತಿಕ್ಕಲು ರಾಜಕೀಯ ತಂತ್ರಗಾರಿಕೆ ಮಾಡಿ ಪತ್ರಿಕಾ ಬರಹಗಳನ್ನು ಹತ್ತಿಕ್ಕಿದರು, ಆದರೆ ಅದೇ ಬರಹ ಗಳು ಸಂಪದ ವೆಬ್ಸೈಟ್ ನಲ್ಲಿ ಮತ್ತು ಸ್ಕ್ರೈಬ್ಡ್ ವೆಬ್ ನಲ್ಲಿ ಪ್ರಕಟವಾದಾಗ, ಅದರ ಬಗ್ಗೆ ಪಾಪ್ಯುಲಾರಿಟಿ ಯಾವ ಮಾಟ್ಟಕ್ಕೆ ಬಂದಿದೆ ಎಂದು ತೋರಲು ಈ ವೆಬ್ ಫೋಟೋ ನೋಡಿದರೆ ಗೊತ್ತಾಗುತ್ತೆ, ದಿನಕ್ಕೆ ಸಾವಿರಾರು ಜನರು ಓದುತ್ತಿದ್ದಾರೆ ಎಂದರೆ ಮನಸಿಗೆ ತೃಪ್ತಿ ತರದೆ ಇದ್ದೀತೆ, ರಾಜಕಾರಣ ಮಾಡಿ ಸರಸ್ವತಿ ದೇವಿಯ ವಂಚನೆಗೆ ಇಳಿದವರಿಗೆ ನಿರಾಷೆ ಆಗದೆ ಇದ್ದೀತೆ

                                                    Documents can be found at 
                    http://www.scribd.com/sridharababu1234

PTCL ACT AND ITS COMPLETE SIGNIFICANCE UNDER PRESENT SCENARIO

Karnataka Land Laws - Ptcl Act and Implications in Kannada

PERSONAL INFORMATION OF OFFICER CANNOT BE ASKED - JUSTICE K. BHAKTAVATSALA

H.E. Rajashekarappa Vs. State Public Information Officer and Ors. ILR 2008 Kar 3646 Honourable Judges: K. Bhakthavatsala, J. Date of Judgement: 01/07/2008, Writ Petition No. 10663 of 2006, The object of the Act is to provide right to information for citizens to secure access to information under the control of public authorities, in order to promote transparency and accountability in the working of every public authority. In view of the above provisions excerpted, it cannot be said that Section 2(f) of the Act encompasses the personal information of the officials of the public authority. The intention of the legislation is to provide right to information to a citizen pertaining to public affairs of the public authority. Therefore, the respondent No. 3 had no right under the Act to seek personal information of the petitioner. The respondent No. 2/appellant authority has erred in directing the petitioner to furnish the information as sought for by the respondent No. 3. As the respondent's application is vexatious and it is an attempt made to settle scores with the petitioner, it is a fit case to impose heavy costs in favour of the petitioner and against the respondent No. 3.

CASE LAW ON LAND LAWS