CUSTOM SEARCH

ಈ ಬ್ಲಾಗಿನಲ್ಲಿ ದೊರೆಯಬಹುದಾದ ಮಾಹಿತಿ - BLOG ARCHIEVE

INFORMATION COMMISSIONER CANNOT DIRECT TO GIVE INFORMATION IN A COMPLAINT UNDER SECTION 18 ONLY APPELLATE AUTHORITY HAVE SUCH POWER UNDER SECTION 19.

READ FULL JUDGMENT
Supreme Court Bench Consisting of: Justice G.S. Singhvi, Justice Sudhansu Jyoti Mukhopadhaya in a case of Chief Information Commr.& Anr vs State Of Manipur & Anr Decided on 12-12-2011: “The nature of the power under Section 18 is supervisory in character whereas the procedure under Section 19 is an appellate procedure and a person who is aggrieved by refusal in receiving the information which he has sought for can only seek redress in the manner provided in the statute, namely, by following the procedure under Section 19. This Court is, therefore, of the opinion that Section 7 read with Section 19 provides a complete statutory mechanism to a person who is aggrieved by refusal to receive information. Such person has to get the information by following the aforesaid statutory provisions. The contention of the appellant that information can be accessed through Section 18 is contrary to the express provision of Section 19 of the Act. It is well known when a procedure is laid down statutorily and there is no challenge to the said statutory procedure the Court should not, in the name of interpretation, lay down a procedure which is contrary to the express statutory provision.”

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕಾನೂನಿನಲ್ಲಿ ಇರುವ ಅರ್ಹತೆ

ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಭೂಮಿಯನ್ನು ಕೃಷಿ ಮಾಡುವವನನ್ನು ಹೊರತುಪಡಿಸಿ ಬೇರಾವುದೇ ವ್ಯಕ್ತಿ ಭೂ ಮಾಲೀಕರಾಗಿ ಅಥವಾ ಗೇಣಿದಾರರಾಗಿ ಅಥವಾ ಅಡಮಾಡನದಾರರಾಗಿರುವಂತಿಲ್ಲ. ಒಬ್ಬ ವ್ಯಕ್ತಿ ಒಂದು ಕುಟುಂಬದ ಸದಸ್ಯನಾಗದಿರಲಿ ಅಥವಾ ಕುಟುಂಬವಿಲ್ಲದಿರುಲು ಅಥವಾ ಒಂದು ಕುಟುಂಬಕ್ಕೆ ಭೂಮಿ ಹೊಂದುವ ಪರಿಮಿತಯನ್ನು 10 ಯುನಿಟ್ ಗಳೆಂದು ನಿಗದಿಪಡಿಸಲಾಯಿತು (ಒಂದು ಯೂನಿಟ್ ಗೆ 5.4 ಎಕರೆ ಡಿ-ವರ್ಗದ ಜಮೀನುಗಳ), ಶೈಕ್ಷಣಿಕ, ಧಾರ್ಮಿಕ ಅಥವಾ ಧಾರ್ಮಿಕ ದತ್ತಿ ಸಂಸ್ಥೆಗಳು ಅಥವಾ ಸೊಸೈಟಿ ಅಥವಾ ಭೂಮಿಯ ಆದಾಯವನ್ನು ಪೂರ್ಣವಾಗಿ ತನ್ನ ಸಂಸ್ಥೆಗೆ ಬಳಸಿಕೊಳ್ಳುವ ಟ್ರಸ್ಟ್, ಸೊಸೈಟಿ ಇವುಗಳ 20 ಯೂನಿಟ್ ಗಳಷ್ಟು ಭೂಮಿಯನ್ನು ಹೊಂದಬಹುದು. ಅದೇ ರೀತಿ ಭೂಮಿಯನ್ನು ಪ್ರತಿಯಾಗಿ ತನ್ನ ಸಂಶೋಧನೆ ಅಥವಾ ಬೀಜ ಕೇಂದ್ರ ಅಥವಾ ಎರಡೂ ಉದ್ದೇಶಕ್ಕೆ ಬಳಸಿಕೊಳ್ಳುವ ಸಕ್ಕರೆ ಕಾರ್ಖಾನೆ 50 ಯೂನಿಟ್ ಗಳಷ್ಟು ಭೂಮಿಯನ್ನು ಹೊಂದಬಹುದು. ಈ ಎಲ್ಲಾ ನಿರ್ಬಂದ, ಪರಿಮಿತಿ ಇತ್ಯಾದಿಗಳನ್ನು ಭೂಮಿ ಹೊಂದಲು ವಿಧಿಸಿದಾಗ್ಯೂ ಸರ್ಕಾರವು ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಾದ ಕೈಗಾರಿಕೆ, ಶಿಕ್ಷಣ, ಧಾರ್ಮಿಕ ವಸತಿ, ತೋಟಗಾರಿಗೆ ಮತ್ತು ಹೂ ಬನಗಳ ಅವಶ್ಯಕತೆಗಾಗಿ ಕೆಲವೊಂದು ಅವಕಾಶಗಳನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಸೆಕ್ಷನ್ 109(1)ರ ಅಡಿಯಲ್ಲಿ ಕ್ರಮವಾಗಿ 20 ಯುನಿಟ್ ಗಳು, 4 ಯುನಿಟ್ ಗಳು, 1 ಯುನಿಟ್, 10 ಯುನಿಟ್ ಗಳು ಮತ್ತು 20 ಯೂನಿಟ್ ಗಳನ್ನು ಹೊಂದಲು ಅವಕಾಶ ಮಾಡಿದೆ. ಒಂದು ವೇಳೆ ಉದ್ದೇಶ ಮತ್ತು ವಿಸ್ತೀರ್ಣ ಬದಲಾದರೆ ಅಥವಾ ಮೀರಿದರೆ ಇದನ್ನು 109 (1ಎ) ಸೆಕ್ಷನ್ ಅಡಿಯಲ್ಲಿ ಪರಿಗಣಿಸಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಅಧಿಕಾರಸ್ಥ ಸಮಿತಿಯ ಶಿಫಾರಸ್ಸಿನೊಂದಿಗೆ ಮತ್ತು ಸಚಿವ ಸಂಪುಟ ಅನುಮೋದನೆಯೊಂದಿಗೆ ಸರ್ಕಾರವು ತನ್ನ ಅಧಿಕಾರ ಬಳಸಿ ಯಾವುದೇ ವಿಸ್ತೀರ್ಣವನ್ನು ಮತ್ತು ಯಾವುದೇ ಉದ್ದೇಶಕ್ಕೆ ವಿನಾಯಿತಿ ಅಥವಾ ಅನುಮತಿ ನೀಡಬಹುದಾಗಿದೆ. ಈ ನಿಯಾಮಾನುಸಾರ, ಯಾವುದೇ ನೊಂದಾಯಿತಿ ಸೊಸೈಟಿ ಅಥವಾ ಜಿಲ್ಲಾಧಿಕಾರಿಗಳಿಂದ ಅಥವಾ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆದು ಕೃಷಿ ಭೂಮಿಯನ್ನು ಕೊಳ್ಳಬಹುದಾಗಿದೆ ಅಥವಾ ಹೊಂದಬಹುದಾಗಿದೆ.

ಬಗವದ್ಗೀತೆ ಸಾರಾಂಶ

ಗಾಯತ್ರಿ ಮಂತ್ರ - ಸಂಗ್ರಹ

ಗಾಯತ್ರಿ ಮಂತ್ರ
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹೀ ತನ್ನೋ ಬುದ್ದಿ: ಪ್ರಚೋದಯಾತ್
ಓಂ ಭಾಸ್ಕರಾಯ ವಿದ್ಮಹೇ ಜ್ಯೋತಿಷ್ಕರಾಯ ಧೀಮಹೀ ತನ್ನೋ ಆಧಿತ್ಯ ಪ್ರಚೋದಾಯಾತ್
ಓಂ ಸೋಮರಾಜಾಯ ವಿದ್ಮಹೇ ಮಹಾರಾಜಯ ಧೀಮಹೀ ತಾನ್ನಶ್ಚನ್ದ್ರ ಪ್ರಚೋದಯಾತ್
ಓಂ ಗಜಧ್ವಜಾಯ ವಿದ್ಮಹೇ ಸೋಮಹಸ್ತಾಯ ಧೀಮಹೀ ತನ್ನೋ ಬುಧ ಪ್ರಚೋದಯಾತ್
ಓಂ ಅಂಗೀರಸಾಯ ವಿದ್ಮಹೇ ಸುರಾಚಾರ್ಯಾಯ ಧೀಮಹೀ ತನ್ನೋ ಗುರು ಪ್ರಚೋದಯಾತ್
ಓಂ ಭಾರ್ಗವಾಯ ವಿದ್ಮಹೇ ಅಸುರಾಚರ್ಯಾಯ ಧೀಮಹಿ ತನ್ನೋ ಶುಕ್ರ ಪ್ರಚೋದಯಾತ್
ಓಂ ಶನೈಶ್ಚರಾಯ ವಿದ್ಮಹೇ ಛಾಯಾಪುತ್ರಾಯ ಧೀಮಾಹೀ ತನ್ನೋ ಮಂದ: ಪ್ರಚೋದಯಾತ್
ಓಂ ನಗಧ್ವಜಾಯ ವಿದ್ಮಹೇ ಪದ್ಮಹಸ್ತಾಯ ಧೀಮಹಿ ತನ್ನೋ ರಾಹು ಪ್ರಚೋದಯಾತ್
ಓಂ ಜೈಮಿನೀ ಗೋತ್ರಾಯ ವಿದ್ಮಹೇ ಧೂಮ್ರವರ್ಣಾಯ ಧೀಮಹೀ ತನ್ನೋ ಕೇತು ಪ್ರಚೋದಯಾತ್
ಓಂ ನಮಶ್ಚಕ್ರಾಯ ವಿದ್ಮಹೇ ಸಹಸ್ರ ಜ್ವಾಲಾಯ ಧೀಮಹಿ ತನೋ ಸುದರ್ಶನ: ಪ್ರಚೋದಯಾತ್
ಓಂ ಸಹಸ್ರಾಕ್ಷಾಯ ವಿದ್ಮಹೇ ಶತ ಯಜ್ಞಾಯ ಧೀಮಹಿ ತನೋ ಸುದರ್ಶನ: ಪ್ರಚೋದಯಾತ್
ಓಂ ಸುದರ್ಶನಾಯ ವಿದ್ಮಹೇ ಮಹಾ ಜ್ವಾಲಯ ಧೀಮಹಿ ತನ್ನೋ ಚಕ್ರ: ಪ್ರಚೋದಯಾತ್
ಓಂ ತತ್ಪುರುಷಾಯ ವಿದ್ಮಹೇ ಚಕ್ರತುಂಡಾಯ ಧೀಮಹಿ ತನ್ನೋ ನಂದಿ ಪ್ರಚೋದಯಾತ್
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್
ಓಂ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನೀಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ಓಂ ವಜ್ರನಕಾಯ ವಿದ್ಮಹೇ ತೀಕ್ಷ್ಣದಂಷ್ಟ್ರಾಯ ಧೀಮಹಿ ತನ್ನೋ ನರಸಿಂಹ ಪ್ರಚೋದಯಾತ್
ಓಂ ಉಗ್ರನರಸಿಂಹಾಯ ವಿದ್ಮಹೇ ವಜ್ರನಕಾಯ ಧೀಮಹಿ ತನ್ನೋ ನಾರಸಿಂಹ: ಪ್ರಚೋದಯಾತ್
ಓಂ ನಿರಂಜನಾಯ ವಿದ್ಮಹೇ ನಿರಪಾಸಾಯ ಧೀಮಹಿ ತನ್ನೋ ಶ್ರೀನಿವಾಸ: ಪ್ರಚೋದಯಾತ್
ಓಂ ಪರಮಹಂಸಾಯ ವಿದ್ಮಹೇ ಮಹಾಹಂಸಾಯ ಧೀಮಹಿ ತನ್ನೋ ಹಂಸ: ಪ್ರಚೋದಯಾತ್
ಓಂ ಗಿರಿಜಾಯೇಚ ವಿದ್ಮಹೇ ಶಿವಪ್ರಿಯಾಯೇ ಚ ಧೀಮಹಿ ತನ್ನೋ ದುರ್ಗ ಪ್ರಚೋದಯಾತ್
ಓಂ ಕಾತ್ಯಾಯನಾಯ ವಿದ್ಮಹೇ ಕನ್ಯಾ ಕುಮಾರೀ ಚ ಧೀಮಹಿ ತನ್ನೋ ದುರ್ಗಾ ಪ್ರಚೋದಯಾತ್
ಓಂ ವಿಷ್ಣವೇಚ ವಿದ್ಮಹೇ ವಾಸುದೇವಾಯ ಧೀಮಹಿ ತನೋ ವಿಷ್ಣು: ಪ್ರಚೋದಯಾತ್
ಓಂ ದೇವಕೀ ನಂದನಾಯೈಚ ವಿದ್ಮಹೇ ವಾಸುದೇವಾಯೈ ಧೀಮಹಿ ತನ್ನೋ ಕೃಷ್ಣ: ಪ್ರಚೋದಯಾತ್
ಓಂ ಮಹಾದೇವ್ಯಾಯ ವಿದ್ಮಹೇ ರುದ್ರ ಮೂರ್ತಯೇ ಧೀಮಹಿ ತನ್ನೋ ಶಿವ: ಪ್ರಚೋದಯಾತ್
ಓಂ ಯಕ್ಷರಾಜಾಯ ವಿದ್ಮಹೇ ಅಲಕದೀಶಾಯ ಧೀಮಹಿ ತನ್ನೋ ಕುಬೇರ: ಪ್ರಚೋದಯಾತ್
ಓಂ ಸೂರ್ಯಪುತ್ರಾಯ ವಿದ್ಮಹೇ ಮಹಾಬಲಾಯ ಧೀಮಹಿ ತನ್ನೋ ಹನುಮ: ಪ್ರಚೋದಯಾತ್
ಓಂ ಅಂಜನೀ ಸುತಾಯಚ ವಿದ್ಮಹೇ ವಾಯುಪುತ್ರಾಯಚ ಧೀಮಹಿ ತನ್ನೋ ಮಾರುತಿ ಪ್ರಚೋದಯಾತ್
ಓಂ ಪರಮೇಶ್ವರ್ಯಾ: ವಿದ್ಮಹೇ ಪರತತ್ವಾಯ ಧೀಮಹಿ ತನ್ನೋ ಬ್ರಹ್ಮ: ಪ್ರಚೋದಯಾತ್
ಓಂ ಚತುರ್ಮುಕಾಯ ವಿದ್ಮಹೇ ಹಂಸರುದ್ರಾಯ ಧೀಮಹಿ ತನ್ನೋ ಬ್ರಹ್ಮ: ಪ್ರಚೋದಯಾತ್
ಓಂ ವೇದಾತ್ಮನಾಯ ವಿದ್ಮಹೇ ಹಿರಣ್ಯಗರ್ಬಾಯ ಧೀಮಹಿ ತನ್ನೋ ಬ್ರಹ್ಮ: ಪ್ರಚೋದಯಾತ್
ಓಂ ಸರಸ್ವತ್ಯೇಚ ವಿದ್ಮಹೇ ಬ್ರಹ್ಮಪುತ್ರೀಚ ಧೀಮಹಿ ತನ್ನೋ ಸರಸ್ವತೀ ಪ್ರಚೋದಯಾತ್
ಓಂ ಸಹಸ್ರ ನೇತ್ರಾಯ ವಿದ್ಮಹೇ ವಜ್ರ ಹಸ್ತ್ರಾಯ ಧೀಮಹಿ ತನ್ನೋ ಇಂದ್ರ ಪ್ರಚೋದಯಾತ್
ಓಂ ಸೂರ್ಯ ಪುತ್ರಾಯ ವಿದ್ಮಹೇ ಮಾಹಾಕಾಲಾಯ ಧೀಮಹಿ ತನ್ನೊ ಯಮ: ಪ್ರಚೋದಯಾತ್
ಓಂ ಜಲಬಿಂಬಾಯ ವಿದ್ಮಹೇ ನೀಲ ಪುರುಷಾಯೇ ಚ ಧೀಮಹಿ ತನ್ನೋ ವರುಣ: ಪ್ರಚೋದಯಾತ್
ಓಂ ಮಹಾಜ್ವಾಲಾಯ ವಿದ್ಮಹೇ ಅಗ್ನಿ ದೇವಾಯ ಧೀಮಹಿ ತನ್ನೋ ಅಗ್ನಿ ಪ್ರಚೋದಯಾತ್
ಓಂ ತತ್ ಪುರುಷಾಯ ವಿದ್ಮಹೇ ಮಹಾ ಸೇನಾಯ ಧೀಮಹಿ ತನ್ನೋ ಶನ್ಮುಗ: ಪ್ರಚೋದಯಾತ್
ಓಂ ಪ್ರುತ್ವೀದೇವ್ಯಾಯೇಚ ವಿದ್ಮಹೇ ಸಹಸ್ರ ಮೂರ್ತಯೇ ಚ ಧೀಮಹಿ ತನ್ನೋ ಪ್ರುತ್ವಿ ಪ್ರಚೋದಯಾತ್
ಓಂ ತುಳಸೀ ದೇವ್ಯಾಚ ವಿದ್ಮಹೇ ವಿಷ್ಣು ಪ್ರಿಯಾಯೈಚ ಧೀಮಹಿ ತನ್ನೋ ಬೃಂದ: ಪ್ರಚೋದಯಾತ್

ಪೂಜಾ ಸಂಕಲ್ಪ ಕನ್ನಡದ ಬಾಷೆಯಲ್ಲಿ

ಪೂಜಾ ಸಂಕಲ್ಪ ವಿಧಾನ

ಶುಭ ಶೋಭನೆ ಮುಹೂರ್ತೆ ಅದ್ಯ ಬ್ರಹ್ಮಣಃ ದ್ವಿತೀಯ ಪರಾರ್ದೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತಖಂಡೇ ಗೋದಾವರ್ಯಾ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ದಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಂದ್ರಮಾನೇ ಪ್ರಭವಾದಿ ಷಷ್ಠಿ ಸಂವತ್ಸರಾಣಾಂ ಮಧ್ಯೇ ಖರ ನಾಮ ಸಂವತ್ಸರೇ, ಉತ್ತರಾಯನೇ/ಧಕ್ಷಿಣಾಯನೇ ________ ಋತೌ ______ ಮಾಸೇ, ಶುಕ್ಲ/ಕೃಷ್ಣ ಪಕ್ಷೇ ______ ತಿಥಿಯಾಂ _________ ವಾರ ಯುಕ್ತಾಯಾಂ, ಶುಭನಕ್ಷತ್ರ ಶುಭಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ, ಮಮ _________ ಗೋತ್ರೋದ್ಬವಸ್ಯ _____ರಾಷೆ, _____ ನಕ್ಷತ್ರೆ ಜಾತಃ _________ ನಾಮದ್ಯೇಯಸ್ಯ, ಉಪಾರ್ಥ ಸಮಸ್ತ ದುರಿತ ಕ್ಷೇಮ ದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಇಷ್ಟ ದೇವತಾ __ಶ್ರೀ ಅಭಯಾಂಜನೇಯ ಸ್ವಾಮಿ ದೇವತಾ ಅನುಗ್ರಹೇಣ ಮಮ ________ ಗೋತ್ರೋದ್ಬವಸ್ಯ ______ರಾಷೆ _____ ನಕ್ಷತ್ರೆ ಪಿತಾ _______ ನಾಮದ್ಯೇಯಸ್ಯ, ______ರಾಷೆ _____ ನಕ್ಷತ್ರೆ ಮಾತಾ _______ ನಾಮದ್ಯೇಯಸ್ಯ, ______ರಾಷೆ _____ ನಕ್ಷತ್ರೆ ಜಾತಃ _________ ನಾಮದ್ಯೇಯಸ್ಯ ______ರಾಷೆ _____ ನಕ್ಷತ್ರೆ ಜಾತಃ ಮಮ ಧರ್ಮಪತ್ನಿ __________ ರಾಷೆ __________ ನಕ್ಷತ್ರೆ ________ ನಾಮದ್ಯೇಯಸ್ಯ ಮಮ ಕುಮಾರ್ಯಾಹ/ಕುಮಾರ್ತ್ಯಾಹ ______ ರಾಷೆ ______ ನಕ್ಷತ್ರೆ _______ ನಾಮದ್ಯೇಯಸ್ಯ, __________ ರಾಷೆ _________ ನಕ್ಷತ್ರೆ __________ ನಾಮದ್ಯೇಯಸ್ಯ - ಅಸ್ಯ

ಅಸ್ಯ - ಜಾತಕಾದಿ ಸೂಚಿತ ಸರ್ವಾರಿಷ್ಟ ದೋಷ ಪರಿಹಾರ್ಥಂ, ವಿಶೇಷತಾ ಪಂಚಮ, ಅಷ್ಟಮ, ಸಾಡೇಶಾತ್ ಶನಿದೋಷ ಪರಿಹಾರ್ಥಂ, ನವಗ್ರಹ ದೇವತಾ ಪೀಡಾ ಪರಿಹಾರಾರ್ಥಂ, ದುಸ್ವಪ್ನ ಪೀಡಾ ಪರಿಹಾರಾರ್ಥಂ, ಅಪಶಕುನ ಪೀಡಾ ಪರಿಹಾರಾರ್ಥಂ, ರಾಹು ಕೇತು ಗ್ರಹ ದೋಷ ನಿವಾರಣಾರ್ಥಂ, ಸರ್ವ ದೇವತಾ ಶಾಪ ವಿಮೋಚನಾರ್ಥಂ, ಮಾತಾ ಪಿತೃ ದೇವತಾ ಶಾಪ ವಿಮೋಚನಾರ್ಥಂ, ಸರ್ವ ಗುರು ದೇವತಾ ಶಾಪ ದೋಷ ವಿಮೋಚನಾರ್ಥಂ, ಸರ್ವ ಬಂದು ಬಾಂದವ್ಯ ದೇವತಾ ಶಾಪ ವಿಮೋಚನಾರ್ಥಂ, ಸರ್ವ ದುಃಖ ವಿಮೋಚನಾರ್ಥಂ, ಸರ್ವ ಸಂಕಷ್ಟ ಪರಿಹಾರಾರ್ಥಂ, ಸರ್ವ ಅಪನಿಂದನಾ ನಿವಾರಣಾರ್ಥಂ, ಸರ್ವ ಅವಹೇಳನಾ ಅಭಯಾರ್ಥಂ, ಸರ್ವ ಶತ್ರು ದುಷ್ಟಾಲೋಚನಾ ಅಭಯಾರ್ಥಂ, ಶತ್ರು ಶಾಪ ಕೋಪ ನಿವಾರಣಾರ್ಥಂ, ಶತ್ರು ಕ್ರೋದ ಮದ ಮಾತ್ಸರ್ಯ ಬಯ ನಿವಾರಣಾರ್ಥಂ, ಸಮಸ್ತ ಕಳಂಕ, ದೋಷ, ವಿಪ್ಪತ್ತು ಪರಿಹಾರ್ಥಂ,

ಅಸ್ಯ - ಶತ್ರು ಪರಯಂತ್ರ, ಪರತಂತ್ರ, ಪರಮಂತ್ರ, ಪರ ವಿದ್ಯಾ ಚೇದಣಾರ್ಥಂ, ಬೇದಣಾರ್ಥಂ, ಸಂಹಾರಣಾರ್ಥಂ, ಸ್ವಮಂತ್ರ, ಸ್ವಯಂತ್ರ, ಸ್ವತಂತ್ರ, ಸ್ವವಿದ್ಯಾಃ ಪ್ರಕಟಣಾರ್ಥಂ, ಭೂತ ಪ್ರೇತ ಪಿಶಾಚ ಶಾಕಿನಿ ಡಾಕಿನಿ ವಿದ್ವಂಸನಾಶಕ್ತಿ ಉಚಾಟನಾರ್ಥಂ, ಶಮನಾರ್ಥಂ, ಸಂಹಾರಣಾರ್ಥಂ, ಸರ್ವ ಪಾಪ ವಿನಾಶನಾರ್ಥಂ, ದೇಹೇ ಸ್ಥಿತಿ ನಾನಾ ವ್ಯಾದಿ, ಬಾದ, ಉಪದ್ರವ, ಆಪತ್ತು, ವಿಪ್ಪತ್ತು, ದೋಷ ನಿವಾರಣಾರ್ಥಂ, ಅಪ ಮೃತ್ಯು ದೋಷ ನಿವಾರಣಾರ್ಥಂ, ಅಕಾಲ ಮೃತ್ಯು ದೋಷ ಪರಿಹಾರಾರ್ಥಂ, ವಿಷ ಜಂತು ಬಾದ ನಿವಾರಣಾರ್ಥಂ, ಅಂಗಾಗ ದೋಷ ನಿವಾರಣಾರ್ಥಂ, ಸರ್ವವಿದ ಮೋಸ ಪ್ರಕ್ರಿಯಾ ಬೇದಣಾರ್ಥಂ, ಚೇದಣಾರ್ಥಂ, ಸಂಹಾರಣಾರ್ಥಂ, ಪ್ರಾರಂಬೇ ಸಂಚಿತ ದ್ರೋಹ ಸಂಹಾರಣಾರ್ಥಂ, ಸರ್ವ ವ್ಯಾಘ್ರ ದೃಷ್ಠಿ ಪೀಡಾ ಪರಿಹಾರಾರ್ಥಂ, ಸರ್ವ ಶತ್ರು ದೃಷ್ಠಿ ಪೀಡಾ ಪರಿಹಾರಾರ್ಥಂ, ಸಮಸ್ತ ಆರ್ಥಿಕ ಮುಗ್ಗಟ್ಟು ಪರಿಹಾರಾರ್ಥಂ, ಸರ್ವವಿದ ರಕ್ಷಣಾರ್ಥಂ,

ಅಸ್ಯ - ದೇಹ ಶಕ್ತಿ ವೃದ್ದ್ಯರ್ಥಂ, ಶುದ್ದ ಆಹಾರ ಸೇವನಾ ಸಿದ್ದ್ಯರ್ಥಂ, ಜೀರ್ಣಾಂಗ, ಶ್ವಾಸಾಂಗ, ಬಹಿರ್ದೆಶೆ ಅಂಗಾಗ ಶುದ್ದ ಆರೋಗ್ಯ ಸಿದ್ದ್ಯರ್ಥಂ, ದೇಹೇ ಸ್ಥಿತಿ ಆರೋಗ್ಯ ಬಾಗ್ಯ ಸಿದ್ದ್ಯರ್ಥಂ, ದೇಹೇ ರಕ್ತ ಪರಿಶುದ್ದ್ಯರ್ಥಂ, ಸಮೃದ್ಯರ್ಥಂ, ರಕ್ತ ಪರಿಚಲನಾ ಅಂಗ ಪರಿಶುದ್ದ್ಯರ್ಥಂ, ದ್ವಿಚಕ್ರ ಚತುರ್ಥ ಚಕ್ರ ವಾಹನಾದಿ ಕ್ಷೇಮ ಸಂಚಾರ ಪ್ರಾಪ್ತಿ ಸಿದ್ದ್ಯರ್ಥಂ, ವಾರ್ಷಿಕ ದೂರದೇಶ ವಿಹಾರ ನೆಮ್ಮದಿ ಸಿದ್ದ್ಯರ್ಥಂ, ಅಷ್ಟ ಬೋಗ ಬಾಗ್ಯ ಸಿದ್ದ್ಯರ್ಥಂ, ಅಷ್ಟೈಶ್ವರ್ಯ ಸಿದ್ದ್ಯರ್ಥಂ, ಸಕಲ ಅಷ್ಟ ಬಾಗ್ಯ ಸಿದ್ದ್ಯರ್ಥಂ, ಚತುರ್ ಚಕ್ರ ವಾಹನಾದಿ ಬಾಗ್ಯ ಸಿದ್ದ್ಯರ್ಥಂ, ದನ ಕನಕ ವಸ್ತ್ರಾದಿ ಸಿದ್ದ್ಯರ್ಥಂ, ಅಧಿಕ ಗೃಹ, ನಿವೇಷನ ಬಾಗ್ಯ ಸಿದ್ದ್ಯರ್ಥಂ, ದಾನ್ಯ ಜಲ ಫಲ ಸಮೃದ್ದ ಭೂಬಾಗ್ಯ ಸಿದ್ದ್ಯರ್ಥಂ, ಸಕಲ ವಿದ ವಾಹನ ಅಷ್ಟ ಬೋಗ ಬಾಗ್ಯ ಸಿದ್ದ್ಯರ್ಥಂ, ಮನ ನೆಮ್ಮದಿ, ಗೃಹ ನೆಮ್ಮದಿ, ಬಾಂದವ್ಯ ನೆಮ್ಮದಿ, ವಾಕ್ ನೆಮ್ಮದಿ, ಸ್ನೇಹತ್ವ ಫಲ ಸಿದ್ಯರ್ಥಂ, ಸೌಮ್ಯ ವರ್ತನಾ ಆಚರಿತ ಸಿದ್ದ್ಯರ್ಥಂ, ಸೌಮ್ಯ ಶುದ್ದ ವಾಕ್ ಚತುರತಾ ಸಿದ್ದ್ಯರ್ಥಂ, ಆತ್ಮ ಸ್ಥೈರ್ಯ ವೃದ್ದ್ಯರ್ಥಂ, ಆಚರಿತ ವ್ಯವಹಾರಾದಿ ಕ್ಷೇತ್ರೆ, ಆರ್ಥಿಕ ಕ್ಷೇತ್ರೆ, ಉದ್ಯೋಗ ಕ್ಷೇತ್ರೆ, ವಿದ್ಯಾಕ್ಷೇತ್ರೆ, ವೃತ್ತಿ ಕ್ಷೇತ್ರೆ ಅಭಿವೃದ್ಯರ್ಥಂ, ಸರ್ವ ಕಾರ್ಯ ವಿಜಯಾರ್ಥಂ, ಸರ್ವ ವಿದ್ಯಾ ಸಿದ್ದ್ಯರ್ಥಂ, ಸರ್ವ ಲೋಕ ಜ್ಞಾನ ಸಕಲ ಕಲಾ ಸಿದ್ದ್ಯರ್ಥಂ.

ಮಮ ಗೃಹೆ - ಅಷ್ಟ ದಿಗ್ಬಂದನಾರ್ಥಂ, ಸರ್ವ ವ್ಯಾಘ್ರ ದೃಷ್ಠಿ ಪೀಡಾ ಪರಿಹಾರಾರ್ಥಂ, ಸರ್ವ ಶತ್ರು ದೃಷ್ಠಿ ಪೀಡಾ ಪರಿಹಾರಾರ್ಥಂ, ಶಾಂತಿ ಸಮೃದ್ಯರ್ಥಂ, ನವ ದಾನ್ಯ ಸಮೃದ್ಯರ್ಥಂ, ದನ ಕನಕ ವಸ್ತ್ರಾದಿ ಸಮೃದ್ಯರ್ಥಂ, ಶುದ್ದ ಜಲ ಸಮೃದ್ಯರ್ಥಂ, ಶುದ್ದ ವಾಯು ಸಮೃದ್ದ್ಯರ್ಥಂ, ದನ ದಾನ್ಯ ಅನ್ನ ದಾನ ಯೋಗ ಸಿದ್ದ್ಯರ್ಥಂ, ಲಕ್ಷ್ಮೀ ಕುಬೇರಾದಿ ಸ್ಥಿರವಾಸೇ ಸಿದ್ದ್ಯರ್ಥಂ, ಸಮಸ್ತ ಆರ್ಥಿಕ ಮುಗ್ಗಟ್ಟು ಪರಿಹಾರಾರ್ಥಂ, ಸರ್ವವಿದ ರಕ್ಷಣಾರ್ಥಂ

ಮಮ ವೃತ್ತಿ ಕ್ಷೇತ್ರೆ - ಅಷ್ಟ ದಿಗ್ಬಂದನಾರ್ಥಂ, ಶುದ್ದ ವಾಯು, ಶುದ್ದ ಜಲ ಸಮೃದ್ದ್ಯರ್ಥಂ, ಸರ್ವ ವ್ಯಾಘ್ರ, ಶತ್ರು ದೃಷ್ಠಿ ಪೀಡಾಪರಿಹಾರಾರ್ಥಂ, ದನ ಪ್ರಾಪ್ತಿ ಸಮೃದ್ದ್ಯರ್ಥಂ, ವಿದ್ಯಾದಾನ ಸಮೃದ್ದ್ಯರ್ಥಂ, ಸೌಮ್ಯ ವರ್ತನಾ ಆಚರಿತ ಸಿದ್ದ್ಯರ್ಥಂ, ಸೌಮ್ಯ ಶುದ್ದ ವಾಕ್ ಚತುರತಾ ಸಿದ್ದ್ಯರ್ಥಂ, ಆತ್ಮ ಸ್ಥೈರ್ಯ ವೃದ್ದ್ಯರ್ಥಂ, ದಿನೇ ದಿನೇ ಉತ್ತಮ ಕೀರ್ಥಿ ಪ್ರಾಪ್ತಿ ಸಿದ್ದ್ಯರ್ಥಂ, ಸರ್ವ ವಿದ್ಯಾ ಸಿದ್ದ್ಯರ್ಥಂ, ಸರ್ವ ಲೋಕ ಜ್ಞಾನ ಸಕಲ ಕಲಾ ಸಿದ್ದ್ಯರ್ಥಂ. ಸರ್ವ ಕಾರ್ಯೇಷು ವಿಜಯಾರ್ಥಂ, ಗ್ರಾಹಕ ಸಂತೃಪ್ತಿ ಪ್ರಾಪ್ತಿ ಸಿದ್ದ್ಯರ್ಥಂ

ಮಮ ಮಾನವ ಕುಟುಂಬಾನಾಂ - ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಬ್ಯುದಯಾರ್ಥಂ ಚ ಧರ್ಮಾರ್ಥ ಕಾಮ ಮೋಕ್ಷ ಚತುರ್ವಿದ ಫಲ ಪುರುಷಾರ್ಥ ಸಿಧ್ಯರ್ಥಂ ಭೂತಂ ಯತಾ ಶಕ್ತಿ ವಿಘ್ನೇಶ್ವರ ಮಂತ್ರಂ, ಆಂಜಿನೇಯ ಮಂತ್ರಂ, ಅಷ್ಟೋತ್ತರ, ಹನುಮ ಚಾಲೀಸ ಪಠಾಣಾಕ್ಯಂ, ದೇವಿ ಸ್ತೋತ್ರ ಪಠಣಂ, ಶಿವ ಪೂಜಾಂ, ಶನಿ ಸಿದ್ದ್ಯರ್ಥ ಪೂಜಾಂ, ಕರ್ಮ ಕರಿಷ್ಯೆ ಯಾತಾಚಕ್ತಿ ಶ್ರೀರಾಮ ಪೂಜಾಂ ಕರಿಷ್ಯೇ ಇತಿ ಸಂಕಲ್ಪಂ ಕುರು ಕುರು ಸ್ವಾಹ.

ಪೂಜಾ ಸಂಕಲ್ಪ ವಿದಿ

Pooja Sankalpa in English and Kannada - Sanskrit Literature

CONSUMER PROTECTION ACT – LIMITATION TO TAKE COMPLAINT- CAUSE OF ACTION EXPLAINED BY SUPREME COURT

KANDIMALLA RAGHAVAIAH & CO. VS NATIONAL INSURANCE CO. & ANR. JUSTICE D.K. JAIN, JUSTICE R.M. LODHA Consumer Protection Act, 1986 - Section 24-A of the Act bars any fora set up under the Act, from admitting a complaint, unless the complaint is filed within two years from the date on which the cause of action has arisen. The provision expressly casts a duty on the Commission, admitting a complaint, to dismiss a complaint unless the complainant satisfies the District Forum, the State Commission or National Commission, as the case may be, that the complainant had sufficient cause for not filing the complaint within the period of two years from the date on which the cause of action had arisen. The term "cause of action" is neither defined in the Act nor in the Code of Civil Procedure, 1908 but is of wide import. It has different meanings in different contexts, that is when used in the context of territorial jurisdiction or limitation or the accrual of right to sue. Generally, it is described as "bundle of facts", which if proved or admitted entitle the plaintiff to the relief prayed for. Pithily stated, "cause of action" means the cause of action for which the suit is brought. "Cause of action" is cause of action which gives occasion for and forms the foundation of the suit. In the context of limitation with reference to a fire insurance policy, undoubtedly, the date of accrual of cause of action has to be the date on which the fire breaks out.

ಮಾಹಿತಿ ಹಕ್ಕು ಎಂದರೆ ಏನು ?

"ಮಾಹಿತಿಗಾಗಿ ಹಕ್ಕು" ಎಂದರೆ ಯಾವುದೇ ಸಾರ್ವಜನಿಕ ಪ್ರಾಧಿಕಾರ ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ, ಈ ಅಧಿನಿಯಮದ ಅಡಿಯಲ್ಲಿ ಪಡೆಯಬಹುದಾದ ಮಾಹಿತಿಯ ಹಕ್ಕು ಮತ್ತು ಇದರಲ್ಲಿ,-
(ಎ) ಕೆಲಸದ, ದಸ್ತಾವೇಜುಗಳ, ದಾಖಲೆಗಳ, ಪರಿವೀಕ್ಷಣೆ ಮಾಡುವ;
(ಬಿ) ದಸ್ತಾವೇಜುಗಳ ಅಥವಾ ದಾಖಲೆಗಳ ಟಿಪ್ಪಣಿಗಳನ್ನು, ಉದ್ಧೃತ ಭಾಗಗಳನ್ನು ಅಥವಾ ಪ್ರಮಾಣೀಕೃತ ಪ್ರತಿಗಳನ್ನು ತೆಗೆದುಕೊಳ್ಳುವ;
(ಸಿ) ವಿಷಯ ಸಾಮಗ್ರಿಯ ಪ್ರಮಾಣೀಕೃತ ಮಾದರಿಗಳನ್ನು ಪಡೆದುಕೊಳ್ಳುವ;
(ಡಿ) ಡಿಸ್ಕೆಟ್ಗಳು, ಪ್ಲಾಫೀಗಳು, ಟೇಪುಗಳು, ವಿಡಿಯೋ ಕ್ಯಾಸೆಟ್ಗಳ ರೂಪದಲ್ಲಿ ಅಥವಾ ಯಾವುದೇ ಇತರ ವಿದ್ಯುನ್ಮಾನ ವಿಧಾನದಲ್ಲಿ ಅಥವಾ ಅಂತಹ ಮಾಹಿತಿಯನ್ನು ಗಣಕಯಂತ್ರದಲ್ಲಿ ಅಥವಾ ಯಾವುದೇ ಇತರ ಸಾಧನದಲ್ಲಿ ಸಂಗ್ರಹಿಸಿಟ್ಟಿದ್ದರೆ ಅದರ ಮುದ್ರಿತ ಪ್ರತಿಯ ಮೂಲಕ ಮಾಹಿತಿ ಪಡೆಯುವ,

- ಹಕ್ಕು ಒಳಗೊಂಡಿರುತ್ತದೆ.

ಮಾಹಿತಿಯನ್ನು ಖಡ್ಡಾಯವಾಗಿ ಸಾರ್ವಜನಿಕರಿಗೆ ತಿಳಿಯುವ ರೀತಿಯಲ್ಲಿ ಪ್ರಕಟಿಸತಕ್ಕದ್ದು

ಸಾರ್ವಜನಿಕ ಪ್ರಾಧಿಕಾರವು ಈ ಕೆಳ ಕಂಡ ಮಾಹಿತಿಯನ್ನು ಖಡ್ಡಾಯವಾಗಿ ಸಾರ್ವಜನಿಕರಿಗೆ ತಿಳಿಯುವ ರೀತಿಯಲ್ಲಿ ಪ್ರಕಟಿಸತಕ್ಕದ್ದು

೧) ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳನ್ನು;
೨) ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು;
೩) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನು;
೪) ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳನ್ನು;
೫) ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಯಮನಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳನ್ನು;
೬) ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರಪಟ್ಟಿಯನ್ನು;
೭) ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳನ್ನು;
೮) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿಕೆಯನ್ನು; ೯) ಅದರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆಯನ್ನು; ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ
೧೦) ಅದರ ವಿನಿಯಮನಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಗೌರವಧನವನ್ನು;
೧೧) ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯವನ್ನು,
೧೨) ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳನ್ನು;
೧೩) ಅದು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಪತ್ರಗಳನ್ನು ಪಡೆಯುವವರ ವಿವರಗಳನ್ನು;
೧೪) ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು;
೧೫) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು;
೧೬) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು;
೧೭) ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು

- ಪರಿಷ್ಕರಿಸತಕ್ಕದ್ದು.

ಧಾಖಲೆ ಏಂದರೆ ಏನು ? ಮಾಹಿತಿ ಎಂದರೆ ಏನು ?

"ದಾಖಲೆ"ಯು,-

(ಎ) ಯಾವುದೇ ದಸ್ತಾವೇಜು, ಹಸ್ತಪ್ರತಿ ಮತ್ತು ಕಡತವನ್ನು;

(ಬಿ) ಯಾವುದೇ ದಸ್ತಾವೇಜಿನ ಮೈಕ್ರೋಫಿಲಂ, ಮೈಕ್ರೋಫಿಲ್ಮ್ ಮತ್ತು ಪಡಿಯಚ್ಚು ಪ್ರತಿಯನ್ನು;

(ಸಿ) ಅಂತಹ ಮೈಕ್ರೋಫಿಲಂನಲ್ಲಿ (ಗಾತ್ರವನ್ನು ವಿಸ್ತರಿಸಿರಲಿ ಅಥವಾ ವಿಸ್ತರಿಸದಿರಲಿ) ಸಾಕಾರಗೊಳಿಸಿರುವ ಪ್ರತಿರೂಪ (ಇಮೇಜ್) ಅಥವಾ ಪ್ರತಿರೂಪಗಳ ಮರು ಪ್ರತಿ ಮಾಡುವುದನ್ನು; ಮತ್ತು

(ಡಿ) ಗಣಕಯಂತ್ರ ಅಥವಾ ಯಾವುದೇ ಇತರ ಸಾಧನದ ಮೂಲಕ ಸಿದ್ಧಪಡಿಸಲಾದ ಯಾವುದೇ ಇತರ ವಿಷಯ ಸಾಮಗ್ರಿಯನ್ನು,
- ಒಳಗೊಳ್ಳುತ್ತದೆ.


"ಮಾಹಿತಿ" ಎಂದರೆ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದಿಂದ ಪಡೆಯಬಹುದಾದ ದಾಖಲೆಗಳು, ದಸ್ತಾವೇಜುಗಳು, ಮೆಮೋಗಳು, ಇ-ಮೇಲ್ಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಲಾಗ್ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದಪತ್ರಗಳು, ನಮೂನೆಗಳು, ಮಾದರಿಗಳು, ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹೊಂದಿರುವ ದತ್ತಾಂಶ ಮತ್ತು ಯಾವುದೇ ಖಾಸಗಿ ನಿಕಾಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡಂತೆ ಯಾವುದೇ ರೂಪದಲ್ಲಿರುವ ಯಾವುದೇ ವಿಷಯ ಸಾಮಗ್ರಿ;

ಮಾಹಿತಿ ಹಕ್ಕು ಅಧಿನಿಯಮದ ಉದ್ದೇಶಗಳು

ಭಾರತ ಸಂವಿಧಾನವು ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಸ್ಥಾಪಿಸಿರುವುದರಿಂದ; ಮಾಹಿತಿಯನ್ನು ಪಡೆಯಲಿಚ್ಛಿಸುವ ನಾಗರಿಕರಿಗೆ ಕೆಲವು ಮಾಹಿತಿ ಒದಗಿಸುವುದಕ್ಕೆ ಉಪಬಂಧ ಕಲ್ಪಿಸುವುದು ಈಗ ವಿಹಿತವಾಗಿರುವುದರಿಂದ; ವಾಸ್ತವಿಕ ಪದ್ಧತಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸರ್ಕಾರಗಳ ದಕ್ಷ ಕಾರ್ಯಾಚರಣೆಗಳು, ಪರಿಮಿತ ಆರ್ಥಿಕ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಮತ್ತು ಸೂಕ್ಷ್ಮಮಾಹಿತಿಯ ಗೌಪ್ಯತೆಯ ಸಂರಕ್ಷಣೆ ಒಳಗೊಂಡಂತೆ ಇತರ ಸಾರ್ವಜನಿಕ ಹಿತಾಸಕ್ತಿಗಳೊಂದಿಗೆ ಸಂಘರ್ಷ ಉಂಟಾಗುವ ಸಾಧ್ಯತೆ ಇರುವುದರಿಂದ;

ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಮತ್ತು ಸರ್ಕಾರಗಳು ಹಾಗೂ ಅವುಗಳ ಅಂಗಸಂಸ್ಥೆಗಳು ಜನರಿಗೆ ಜವಾಬ್ಧಾರಿಯಾಗಿರುವಂತೆ ಮಾಡಲು ತಿಳುವಳಿಕೆಯುಳ್ಳ ನಾಗರಿಕರು ಮತ್ತು ಮಾಹಿತಿಯ ಪಾರದರ್ಶಕತೆಯು ಪ್ರಮುಖವಾಗಿರುವುದರಿಂದ;

ಪ್ರಜಾಸತ್ತಾತ್ಮಕ ಆದರ್ಶದ ಸಾರ್ವಭೌಮತೆಯನ್ನು ಸಂರಕ್ಷಿಸುವುದರ ಜೊತೆಗೆ ಸಂಘರ್ಷಕ್ಕೊಳಗಾಗುವ ಹಿತಾಸಕ್ತಿಗಳ ನಡುವೆ ಸಾಮರಸ್ಯ ಮೂಡಿಸುವುದು ಅವಶ್ಯವಾಗಿರುವುದರಿಂದ;

ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರೀ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ನಾಗರಿಕರಿಗೆ ಮಾಹಿತಿ ಪಡೆಯುವ ಹಕ್ಕಿನ ಕಾರ್ಯರೂಪದ ವ್ಯವಸ್ಥೆಯನ್ನು ರೂಪಿಸುವುದಕ್ಕೆ, ಕೇಂದ್ರ ಮಾಹಿತಿ ಆಯೋಗದ ರಚನೆಗೆ ಮತ್ತು ರಾಜ್ಯ ಮಾಹಿತಿ ಆಯೋಗಗಳ ರಚನೆಗೆ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಆನುಷಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸುವ ಅಧಿನಿಯಮ.
ಭಾರತ ಗಣರಾಜ್ಯದ ಐವತ್ತಾರನೇ ವರ್ಷದಲ್ಲಿ ಸಂಸತ್ತಿನಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

ಮಾಹಿತಿ ಹಕ್ಕು ಅಧಿನಿಯಮ ೨೦೦೫


(ಅಧಿನಿಯಮ ಸಂಖ್ಯೆ ೨೦೦೫ ರ ೨೨)
[೧೫ನೇ ಜೂನ್, ೨೦೦೫]


ಭಾರತೀಯ ಸಂವಿಧಾನ - ಕನ್ನಡದಲ್ಲಿ - INDIAN CONSTITUTION IN KANNADA - ಕರ್ನಾಟಕ ಸರ್ಕಾರದ ಕೊಡುಗೆ

CONSTITUTION OF INDIA IN KANNADA LANGUAGE

ಕಾನೂನು ವಿಚಾರದ ಬಗ್ಗೆ ಪ್ರಕಟಣೆಯನ್ನು ಈ ಪ್ರಕಟಣೆ ಮಧ್ಯವರ್ಥಿಗಳು ಏಕೆ ಬಯಸುವುದಿಲ್ಲ

ನನಗೆ ರಾಜಕೀಯ ಶಕ್ತಿಗಳಿಂದ ಪತ್ರಿಕೆಯಲ್ಲಿ ಪ್ರಕಟವಾಗುವ ಬರಹಗಳಿಗೆ ಅಡ್ಡಿಯಾಯಿತು ಅದರೆ ಅದು ಅಂತರ್ಜಾಲದ ಸಂಪದ ಮತ್ತು ವಿಕಿಪೀಡಿಯಾಗೂ ಆವರಿಸಿದೆ ಎಂದರೆ ಸಂಪದಿಗ ನಾಡಿಗ್ ರವರ ಕಾರ್ಯ ನಾವು ಮೆಚ್ಚಬೇಕೆ, ಅವರ ರಾಜಕೀಯ ಹೊಂದಾಣಿಕೆ ಮೆಚ್ಬೇಕೆ ಬರಹಗಾರನ ಸ್ವಾತಂತ್ರವಿಲ್ಲದ ಪ್ರಕಟಣಾ ತಾಣವನ್ನು ಮೆಚ್ಚಬೇಕೆ ಎಲ್ಲವೂ ಅಯೋಮಯವಾಗಿದೆ. ಅದು ಪ್ರಜಾಪ್ರಭುತ್ವ ವಾಧಿಗಳ ತಾಣವಲ್ಲ ಎಂಬುದು ನನ್ನ ಅನಿಸಿಕೆ
WHY WIKIPEDIA ASSOCIATE SUPPRESSES MY PUBLICATION IS IT ZEALOUS OR BAD POLITICS

ಸಮಾಜ ಸೇವೆ ಬಗ್ಗೆ ಮನಸ್ಸು ನಾನೇನು ಮಾಡಲಿ ಬಡವನಯ್ಯ ಎಂದು ಕೈ ಚೆಲ್ಲಿದಾಗ


ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಮುಖ ಹೊತ್ತ ಅನೇಕರು ತಮ್ಮ ಸ್ವಾರ್ಥ ಸಾದನೆಯಲ್ಲಿ ನಿರತರಾಗಿರುವುದನ್ನು ಕಂಡಾಗ ಎಲ್ಲಿ ಬಂದು ನಿಂತೆವಯ್ಯ ಇವೆಲ್ಲಾ ಕಾಣಲಿಕ್ಕೆ ನಮ್ಮಲ್ಲಿ ಪ್ರಾಮಾಣಿಕತೆಯನ್ನು ಬದುಕಿಸಿರುವೆಯಾ. ಪ್ರಾಮಾಣಿಕರು ನಾವು ಎಂದರೆ ಸಂಶಯದಿ ಕಿರುನಗೆಯ ಬೀರುವ ಸಮಾಜದಲ್ಲಿ ತಂದು ಕುಳ್ಳಿರಿಸಿದೆಯಾ, ಹೇ ಪ್ರಭುವೇ ಎಂದು ಅನೇಕ ಬಾರಿ ನಮ್ಮನ್ನು ನಾವು ನಂಬಿದ ಪ್ರಭುವನ್ನು ಜರಿದದ್ದು ಉಂಟು.

ಏಕೆ ಹೀಗೆ, ನಾವು ಮತ್ತು ನಮ್ಮ ನಿಷ್ಟೆ ಸಮಾಜಕ್ಕೆ ಬೇಡವೆ, ಎಲ್ಲರಂತಿಲ್ಲದ ನಾವು ಸಮಾಜದ ಕಣ್ಣಲ್ಲಿ ಅಘೋರಿಗಳಾದೆವೆ. ಅಂತಹ ಸಂಶಯದ ಕಣ್ಣಿನ ನೋಟಕ್ಕೆ ಗುರಿಯಾದ ನಮಗೂ ಏಕಪ್ಪ ಬೇಕು ಈ ಸೇವೆ ಎಂದು ಅನಿಸಿದ್ದು ನಿಜ, ಆದರೆ ಅದೇ ಸೇವೆಯ ಹೆಸರಲ್ಲಿ ಮೋಸಕ್ಕೆ ಇಳಿಯಲು ಎಂದೂ ಮನಸ್ಸು ಮಾಡಿದವರಲ್ಲ, ಎಂಬ ಸತ್ಯ ಯಾರಿಗೆ ಹೇಳಿ ಮೆಚ್ಚಿಸಬೇಕು. ನಾವು ಒಳ್ಳೆಯವರೋ ಕೆಟ್ಟವರೋ ಎಂದು ಇಂದಿಗೂ ಅರ್ಥವಾಗುತ್ತಿಲ್ಲಾ, ಒಬ್ಬ ಸಹಪಾಠಿ ಹೇಳುತ್ತಾನೆ. ಸಾರ್ ನಿತ್ಯ ಸುಮಂಗಲಿ ಅವಳ ನೇರಕ್ಕೆ ಒಟ್ಟೆ ಪಾಡಿಗಾಗಿ ಅವಳು ಮಾಡಿದ್ದು ಸರಿ ಅನ್ನುತ್ತಾಳೆ, ಅವಳಿಗೆ ನನ್ನಲ್ಲಿರುವ ಖಾಯಿಲೆ ಇತರರಿಗೆ ಹರಡದಂತೆ ಕಾಂಡೋಮನ್ನು ಬಳೆಕೆ ಮಾಡಿ ನನ್ನ ಪ್ರಾಮಾಣಿಕತೆ ಮೆರೆದೆ ಎಂದು ತನ್ನ ಕೆಲಸದ ಬಗ್ಗೆ ಆಕೆ ಪ್ರತಿ ದಿನವೂ ಸಂತೋಷ ಪಡುತ್ತಾಳೆ. ಸಮಾಜ ಸುದಾರಕನೊಬ್ಬ ಆಕೆಯ ಸ್ಟೋರಿಯನ್ನು ಎಲ್ಲರಿಗೂ ತಿಳಿಯುವಂತೆ ಕನಿಕರ ಬರುವಂತೆ ಮಾಡಿ ಚಿತ್ರಣ ಮಾಡಿ ನಾನು ಸಮಾಜ ಸೇವಾ ದುರೀಣ ಎಂದು ಬಿರುದು ಪಡೆಯುವವರು ಸಮಾಜ ಸೇವಕರೆ. ಆದರೆ ಇಲ್ಲಿ ಸಮಾಜ ಸೇವೆಯನ್ನು ಬಹಳ ಗೌಣವಾಗಿ ಮಾಡಿದವರು ಆ ನಿತ್ಯ ಸುಮಂಗಲಿ, ಯಾಕೆ ಗೊತ್ತೆ ಆಕೆ ಸಮಾಜದ ವಿಕೃತಿಗಳನ್ನು ತಣಿಸಿ ಉತ್ತಮ ಹಾದಿಗೆ ಜನರನ್ನು ಬಿಡುತ್ತಿರುವ ಸಮಾಜ ಸೇವೆ ಒಂದೆಡೆಯಾದರೆ, ಆಕೆ ಗಂಡು ಸಂತತಿಯ ವಿಕೃತ ಬಾವನೆಗಳಿಗೆ ಬ್ರೇಕ್ ಇನ್ಸ್ ಪೆಕ್ಟರ್ ಸೇವೆಯನ್ನೂ ಮಾಡುತ್ತಾಳೆ. ಅಂತಹ ಸ್ಟೋರಿಗಳನ್ನು ನೋಡಿದ ಇನ್ನೂ ಅರ್ಥವಾಗದ ವಯಸ್ಸಿನಲ್ಲಿರುವ ಯುವಕ ಅದನ್ನು ನೋಡಿ ಗೊಂದಲಕ್ಕೆ ಈಡಾದ ಹಾಗೆ ಆಗಿದೆ ನೋಡಿ ನಿಮ್ಮ ಬದುಕು, ನೀವು ಇನ್ನು ಬೇಜಾನು ಕಲೀಬೇಕು ಸಾರ್ ಅಂತಾನೆ.

ಅಲ್ರೀ ನಾನು ಸಮಾಜ ಸೇವೆಯ ಬಗ್ಗೆ ಮಾತನಾಡುವಾಗ್ಗೆ ಈ ಹೋಲಿಕೆ ಏಕೆ ಎಂದು ಒಮ್ಮೆ ಆಲೋಚಿಸಿದಾಗ ಅಹುದು ನಿತ್ಯಸುಮಂಗಲಿಗೆ ತಾನು ಮಾಡಿದ್ದು ಅವಳ ಪರಿಸರಕ್ಕೆ ಸರಿ ಅನಿಸಿದ ಹಾಗೆಯೇ ನಾನು ಯಾರನ್ನು ತಪ್ಪು ಮಾಡುತ್ತಿದ್ದಾರೆ ಎಂದು ಬಾವಿಸಿರುವೆನೋ ಅವರು ಅವರ ನೇರಕ್ಕೆ ಸರಿ ಮಾಡುತ್ತಿದ್ದಾರೆ. ಅವರ ಧರ್ಮಕ್ಕೆ ಅದು ಸರಿ, ಅದನ್ನು ಅಸಹ್ಯ ಮಾಡಿಕೊಳ್ಳಲು ಮತ್ತು ಬೆಟ್ಟು ಮಾಡಿ ತೋರಲು ನನಗೆ ಅಧಿಕಾರವುಂಟೆ. ಸ್ವಾರ್ಥತೆ ಇಲ್ಲದ ನನ್ನ ಬದುಕು ಹೀಗೆ ಹಸನಾಗಿ ಇರಬಲ್ಲುದೆ, ಮನುಜನು ಸ್ವಾರ್ಥತೆ ಇಲ್ಲದೆ ಜೀವನ ನಡೆಸಬಲ್ಲನೆ, ಯಾವುದನ್ನು ಸತ್ಯಾ ಎಂದು ನಂಬಿ ಅದು ಸುಳ್ಳು ಎಂದು ತಿಳಿದಾಗ ಆಕಾಶವೇ ಕಳಚಿ ಬಿದ್ದಂತಾ ಮನಸ್ಥಿತಿ ತಲುಪುವುದಕ್ಕಿಂತಾ ನಾವು ಇರುವುದೇ ಒಂದು ಸುಳ್ಳಿನಾ ಲೋಕ ಇಲ್ಲಿ ಸತ್ಯವೂ ಇಲ್ಲ ಪ್ರಾಮಾಣಿಕತೆಯೂ ಇಲ್ಲ, ನಮ್ಮ ಮನಸಿಗೆ ನೆಮ್ಮದಿ ನೀಡುವುದನ್ನು, ನಮಗೆ ಸರಿ ಎಂದು ತೋಚಿದ್ದನ್ನು, ನಮ್ಮ ಪ್ರಾಮಾಣಿಕತೆಯನ್ನು ಬೇರೆಯವರಿಂದ ಬಯಸದೆ, ನಾವು ನಮ್ಮ ಕರ್ಮವನ್ನು ಮಾಡೋಣ, ನಮ್ಮ ಮನಸಿಗೆ ನೋವುಂಟು ಮಾಡದೆ ಈ ಸಮಾಜ ಸ್ಪಂದಿಸದು ಎಂಬ ತಿಳುವಳಿಕೆಯಲ್ಲಿಯೇ ನಾವಿರೋಣ, ನಮ್ಮ ಮನಸ್ಸು ಸಮಾಜಕ್ಕೆ ಅರ್ಥವಾಗದು, ಸಮಾಜದ ಮನಸ್ಥಿತಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ನಾನು ಬದಲಾದರೆ ಎಲ್ಲವೂ ಸರಿ ಹೊಂದಬಹುದೆ ಎಂದು ಮನಸ್ಸನ್ನು ಕೇಳಿದರೆ, ಪ್ರಶ್ನೆಯೂ ನಿನ್ನದೆ ಉತ್ತರವೂ ನಿನ್ನದೆ ನಾನೇನು ಮಾಡಲಿ ಬಡವನಯ್ಯ ಎನ್ನಬೇಕೆ.

ಅಂತಹ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡವರೇ ಮಾನಸಿಕ ಶಾಸ್ತ್ರಜ್ಞರು, ಇವರು ಹೇಳುವುದೇನೆಂದರೆ ನಾವು ನಮ್ಮ ಜೀವನಾಧಾರಕ್ಕೆನಂಬಿಕೊಂಡಿರುವ ವ್ಯಕ್ತಿ ಮತ್ತು ಸಂಸ್ಥೆಗಳು ನಮ್ಮನ್ನು ದುರುಪಯೋಗ ಪಡಿಸಿಕೊಂಡರೆ, ನಾವು ಏನನ್ನು ಮಾಡಿದರೆ ತಪ್ಪು ಎಂಬ ನಂಬಿಕೆಯಲ್ಲಿರುವುದನ್ನು ನಮ್ಮಿಂದ ಮಾಡಿಸಿದರೆ/ನಮ್ಮ ಮೇಲೆ ಅಂತಹ ಕೃತ್ಯಗಳು ಅವರಿಂದ ನಡೆದರೆ ಅದು ಬಿಟ್ರೇಯಲ್ (ನಂಬಿಕೆ ದ್ರೋಹ). ನಂಬಿಕೆ ದ್ರೋಹಕ್ಕೆ ಒಳಗಾಗಿರುವ ವ್ಯಕ್ತಿಯ ಮನಸ್ಥಿತಿ ಯಾವ ಮಟ್ಟದಲ್ಲಿ ನೋವನ್ನು ಗೊಂದಲವನ್ನು ಅನುಭವಿಸುತ್ತದೆ ಎಂದರೆ, ಮನೆಯಲ್ಲಿ ತಂದೆಯೇ ತನ್ನ ಮಗಳ ಮೇಲೆ ಕಾಮ ಪ್ರಜ್ಞೆಯನ್ನು ಭೀರಿ ಲೈಂಗಿಕ ಕಿರುಕುಳಕ್ಕೆ ಒಳಗಾದ ವ್ಯಕ್ತಿಗಳು ಯಾವ ರೀತಿಯಲ್ಲಿ ಮನಸ್ಥಿತಿಯಲ್ಲಿ ಇರುತ್ತಾರೋ ಅಂತಹ ಸ್ಥಿತಿಗೆ ಈ ನಂಬಿಕೆ ದ್ರೋಹಕ್ಕೆ ಒಳಗಾದ ವ್ಯಕ್ತಿಗಳು ಬಂದು ನಿಲ್ಲುತ್ತಾರೆ ಎಂದು ಮಾನಸಿಕ ಶಾಸ್ತ್ರಜ್ಞೆ ಜೆನಿಫರ್ ಫ್ರೇಡ್ ಹೇಳುತ್ತಾರೆ.

ಯಾರಿಂದ ನಮ್ಮ ಜೀವನುವು ಸಂತೋಷಮಯವಾಗುವುದೋ, ಉದ್ದಾರವಾಗುವುದೋ, ನೆಲೆಯನ್ನು ಕಾಣುವುದೋ, ಪ್ರೋತ್ಸಾಹವು ದೊರಕುವುದೋ, ರಕ್ಷಣೆ ದೊರೆಯುವುದೋ, ಭದ್ರತೆ ಇರುವುದೋ ಎಂದು ನಂಬಿದ ವ್ಯಕ್ತಿಗೆ ಅಂತಹ ವ್ಯಕ್ತಿ/ಸಂಸ್ಥೆಯಿಂದ ನಂಬಿಕೆ ದ್ರೋಹವಾಗಿ ಲೈಂಗಿಕ ಕಿರುಕುಳ/ ವೈರಿಗಳ ಸಖ್ಯ/ ದಮನಕಾರಿ ನಡವಳಿಕೆ/ ಪ್ರೋತ್ಸಾಹಿಸದೆ ಖಿನ್ನತೆಗೆ ದೂಡುವುದು/ ಮಾತು ಮಾತಿನಲ್ಲಿಯೂ ಪಾಪ ಪ್ರಜ್ಞೆಗೆ ದೂಡುವುದು/ ಬ್ಲಾಕ್ ಮೇಲ್ ತಂತ್ರಗಾರಿಕೆ ಮಾಡುವುದು/ ವೈರಿಗಳಿಂದ ಸುಫಾರಿ ಪಡೆದು ಬೆಳವಣಿಗೆಯನ್ನು ಮಟ್ಟಹಾಕುವುದು/ ವಿದ್ವತ್ತನ್ನು ಬೆಳಕಿಗೆ ಬಿಡದಂತೆ ತಪ್ಪು ಗಾಸಿಫ್ ಬೆಳಸುವುದು/ ಉತ್ತಮವಾದ ಕೆಲಸಗಳಿಂದ ದೂರವಿಡಲು ನಿರುಪಯುಕ್ತ ಕಾರ್ಯದ ಎಡೆ ಕೊಂಡೊಯ್ಯುವುದು/ ಹೀಗೆ ಹತ್ತು ಹಲವು ನಂಬಿಕೆ ದ್ರೋಹದ ಲಹರಿಗೆ ಗುರಿಯಾಗುವ ಮನುಜನ ಸ್ಥಿತಿ ಮಾನಭಂಗಕ್ಕೆ ಒಳಗಾದ ಸ್ತ್ರೀ ಮತ್ತು ಮಕ್ಕಳ ಮನಸ್ಥಿತಿಯಂತೆ ಆಗುತ್ತದೆ ಎಂದು ಮನಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ರಾಜಕೀಯದವರು ಆಡುವ ಈ ಆಟಗಳಲ್ಲಿ ಎಸ್ಟು ಜನರು ಬೇಸತ್ತು ನಮಗೆ ಅಲ್ಲ ಈ ಕ್ಷೇತ್ರ ಎಂದು ಸುಮ್ಮನಾದವರು ಅನೇಕರು ಒಂದೆಡೆಯಾದರೆ, ಸಮಾಜ ಸೇವೆಯ ಹೆಸರಲ್ಲಿ ಬಡವ ಬಲ್ಲಿದರ ಪರ ನಿಂತು ಹೋರಾಡುವುದಾಗಿ ಹುಟ್ಟಿಕೊಂಡ ಸಂಘ ಸಂಸ್ಥೆಗಳು, ಸತ್ಯದಲ್ಲಿ ಅವರ ಪರ ಇಲ್ಲ, ಇವರೆಲ್ಲಾ ಡೋಂಗಿ ಪಟಾಲಮ್ಮುಗಳು ಎಂದು ಅರ್ಥಮಾಡಿಕೊಂಡ ಸತ್ಯವಂತನಿಗೂ ಇಂತಹದ್ದೇ ನಂಬಿಕೆ ದ್ರೋಹವಾಗಿರುತ್ತೆ. ಇಲ್ಲಿ ವ್ಯತ್ಯಾಸವೊಂದೆ ಸತ್ಯದ ಹಾದಿಯಲ್ಲಿ ಈ ವ್ಯಕ್ತಿತ್ವಕ್ಕೆ ಅತ್ಯಾಚಾರವಾಗಿರುತ್ತೆ.

ಇಂತಹ ವಿಶ್ವಾಸ ಘಾತುಕತನವನ್ನು ಹೇಗೆ ನಿಭಾಯಿಸುವುದು, ಮೊದಲಿಗೆ ನಿಮಗೆ ವಿಶ್ವಾಸ ಘಾತವಾಗಿದೆ ಎಂಬುದನ್ನು ನೀವೇ ಒಪ್ಪಿಕೊಳ್ಳಿ, ದ್ವಂದ್ವದಲ್ಲಿ ಇರಬೇಡಿ, ನಾನು ತಪ್ಪು ಮಾಡಿದ್ದೇನೆ ಎಂಬ ಖಿನ್ನತೆಯಿಂದ ಹೊರಬನ್ನಿ, ತಮ್ಮ ಆಪ್ತರು ಅಥವ ಡೈರಿಯಲ್ಲಿ ತಮ್ಮ ಮನಸ್ಸಿನಲ್ಲಿ ಇರುವ ಬಾವನೆಗಳನ್ನು ಹೇಳಿಕೊಳ್ಳಿ, ಒಳ್ಳೆಯ ಆಲೋಚನೆಯಲ್ಲಿರಿ, ದೇವರಲ್ಲಿ ನಿಮಗೆ ಮೋಸ ಮಾಡಿದವರಿಗೆ ಒಳ್ಳೆಯ ಬುದ್ದಿಯನ್ನು ದಯಪಾಲಿಸು ಎಂದು ಕೇಳಿರಿ, ಕೆಲವು ವ್ಯಕ್ತಿಗಳ ಸಹವಾಸವನ್ನು ನೇರವಾಗಿ ಕಡಿವಾಣ ಗೊಳಿಸಿ, ಅಳಬೇಕೆನಿಸಿದರೆ ಬಹಳ ಜೋರಾಗಿ ಏಕಾಂಗಿಯಾಗಿ ಅತ್ತು ಬಿಡಿ ಮನಸ್ಸಿನಲ್ಲಿರುವ ದುಗುಡ ಕಮ್ಮಿಯಾಗುವುದು, ಅನ್ಯ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ, ಸ್ವಲ್ಪ ಸಮಯ ಹಿಡಿಯಬಹುದು ನೀವು ಮತ್ತು ನಿಮ್ಮ ಪರಿಸರ ನೀವು ಪ್ರೀತಿಸುವಂತೆಯೇ ಇರುತ್ತದೆ, ಯಾವುದಕ್ಕೂ ದೃತಿ ಕೆಡಬೇಡಿ, ಪ್ರಪಂಚವೇ ಕೊನೆಯಾಗಿ ಹೋಯಿತು ಎಂಬ ಬಾವನೆ ಬೇಡ ಎಂದು ಮನಶಾಸ್ತ್ರಜ್ಞರ ಅನ್ಲೈನ್ ಬರಹವನ್ನು ಓದಿದಾಗ ಮನಸ್ಸು ಹಾಗೆ ಮಾಡಬೇಕೆಂದು ಹಂಬಲಿಸಿತು, ಕೊನೆಗೆ ಆ ಮನಸ್ಸು ನಾನೇನು ಮಾಡಲಿ ಬಡವನಯ್ಯ ಎಂದುದ್ದಕ್ಕೆ ಪಶ್ಚಾತಾಪ ಪಟ್ಟಿತು. ಜಗತ್ತಿನಲ್ಲಿ ಯಾರು ಮೋಸಕ್ಕೆ ಒಳಗಾಗಿಲ್ಲ ಮಲ್ಲಪ್ಪ ಶೆಟ್ಟಿಯಿಂದ ಮೋಸ ಹೋದ ಕಿತ್ತೂರು ರಾಣಿ ಚೆನ್ನಮ್ಮ ಳಿಲ್ಲವೆ, ರಾಜಾನು ರಾಜರನ್ನು ಮೋಸಗೊಳಿಸಿದ ಚರಿತ್ರೆಯನ್ನು ನಾವು ಕೇಳಿಲ್ಲವೆ, ಇಲ್ಲಿ ಮೋಸಮಾಡಿದವರನ್ನು ಉತ್ತಮ ಮಾತುಗಳಿಂದ ನೆನೆಯಲಾರರು, ಮೋಸಕ್ಕೆ ಒಳಗಾದವರ ಚರಿತ್ರೆ ನಮ್ಮನ್ನು ಮತ್ತೆ ಮತ್ತೆ ತಟ್ಟಿ ಎಬ್ಬಿಸುತ್ತಿದೆ.

ಮತ್ತೊಮ್ಮೆ ಮೋಸ ಹೋಗದಿರಿ, ನಿಮಗೆ ಮೋಸಮಾಡಿರುವವರ ಬಗ್ಗೆ ಪೂರ್ಣ ತಿಳಿದು ಅವರು ಮಾಡಿರುವ ಕೆಲಸವೇನು ಎಂದು ತಿಳಿದು ಅವರಿಗೆ ತಿದ್ದಿಕೊಳ್ಳಲು ಅವಕಾಶ ನೀಡಿ, ಅದಕ್ಕೆ ಅವರು ಅರ್ಹರೆ ಎಂಬುದನ್ನು ಮೊದಲಿಗೆ ನಿರ್ದರಿಸಿ. ಎಲ್ಲವೂ ನಿಮ್ಮಂತೆ ನಿಮ್ಮ ಪ್ರಾಮಾಣಿಕತೆಯ ಹಾದಿಯನ್ನು ಹಿಡಿಯುತ್ತದೆ. ಸತ್ಯಕ್ಕೆ ಜಯವಿದೆ, ಪ್ರಾಮಾಣಿಕತೆಗೆ ಬೆಲೆ ಇದೆ ಯಾವುದೇ ಜಿಗುಪ್ಸೆಗಳು ಉಂಟಾಗಲಿ ಅವುಗಳನ್ನು ಹಿಮ್ಮೆಟ್ಟಿ ಮುನ್ನಡೆಯಿರಿ ನಿಮ್ಮ ಸಾದನೆ ಎಂದೆಂದಿಗೂ ಶುಭವನ್ನು ತಂದು ನಿಮ್ಮ ಬಾಳು ಬಂಗಾರವಾಗುತ್ತದೆ.

ವಿದ್ಯೆ ಯಾರ ಅಪ್ಪನ ಸ್ವತ್ತು ಅಲ್ಲ, ಅದನ್ನು ಕಲಿಯದಂತೆ ತಡೆಯಲು ಸಾದ್ಯವಿಲ್ಲ, ಕಟ್ಟಿಹಾಕಲು ಸಾದ್ಯವಿಲ್ಲ ತಡೆ ಗೋಡೆ ನಿರ್ಮಾಣವೂ ಸಾದ್ಯವಿಲ್ಲ

ಕೆಲವರು ನನ್ನ ಪತ್ರಿಕಾ ಬರಹಗಳನ್ನು ಹತ್ತಿಕ್ಕಲು ರಾಜಕೀಯ ತಂತ್ರಗಾರಿಕೆ ಮಾಡಿ ಪತ್ರಿಕಾ ಬರಹಗಳನ್ನು ಹತ್ತಿಕ್ಕಿದರು, ಆದರೆ ಅದೇ ಬರಹ ಗಳು ಸಂಪದ ವೆಬ್ಸೈಟ್ ನಲ್ಲಿ ಮತ್ತು ಸ್ಕ್ರೈಬ್ಡ್ ವೆಬ್ ನಲ್ಲಿ ಪ್ರಕಟವಾದಾಗ, ಅದರ ಬಗ್ಗೆ ಪಾಪ್ಯುಲಾರಿಟಿ ಯಾವ ಮಾಟ್ಟಕ್ಕೆ ಬಂದಿದೆ ಎಂದು ತೋರಲು ಈ ವೆಬ್ ಫೋಟೋ ನೋಡಿದರೆ ಗೊತ್ತಾಗುತ್ತೆ, ದಿನಕ್ಕೆ ಸಾವಿರಾರು ಜನರು ಓದುತ್ತಿದ್ದಾರೆ ಎಂದರೆ ಮನಸಿಗೆ ತೃಪ್ತಿ ತರದೆ ಇದ್ದೀತೆ, ರಾಜಕಾರಣ ಮಾಡಿ ಸರಸ್ವತಿ ದೇವಿಯ ವಂಚನೆಗೆ ಇಳಿದವರಿಗೆ ನಿರಾಷೆ ಆಗದೆ ಇದ್ದೀತೆ

                                                    Documents can be found at 
                    http://www.scribd.com/sridharababu1234

PTCL ACT AND ITS COMPLETE SIGNIFICANCE UNDER PRESENT SCENARIO

Karnataka Land Laws - Ptcl Act and Implications in Kannada

PERSONAL INFORMATION OF OFFICER CANNOT BE ASKED - JUSTICE K. BHAKTAVATSALA

H.E. Rajashekarappa Vs. State Public Information Officer and Ors. ILR 2008 Kar 3646 Honourable Judges: K. Bhakthavatsala, J. Date of Judgement: 01/07/2008, Writ Petition No. 10663 of 2006, The object of the Act is to provide right to information for citizens to secure access to information under the control of public authorities, in order to promote transparency and accountability in the working of every public authority. In view of the above provisions excerpted, it cannot be said that Section 2(f) of the Act encompasses the personal information of the officials of the public authority. The intention of the legislation is to provide right to information to a citizen pertaining to public affairs of the public authority. Therefore, the respondent No. 3 had no right under the Act to seek personal information of the petitioner. The respondent No. 2/appellant authority has erred in directing the petitioner to furnish the information as sought for by the respondent No. 3. As the respondent's application is vexatious and it is an attempt made to settle scores with the petitioner, it is a fit case to impose heavy costs in favour of the petitioner and against the respondent No. 3.

CASE LAW ON LAND LAWS