CUSTOM SEARCH

ರಸ್ತೆ ಮತ್ತು ಒತ್ತುವರಿ ಬಗ್ಗೆ ಮಾನ್ಯ ನ್ಯಾಯಾಲಯದ ತೀರ್ಪುಗಳು ಏನು ಹೇಳಿವೆ

೧. ವಿಸ್ತರಣೆ ಎಂಬ ಮನುಜನ ಮನದಾಳದ ಆಸೆ ಎಲ್ಲರಲ್ಲೂ ಇರುವುದು ಸಹಜ. ಈ ವಿಸ್ತರಣೆ ಯನ್ನು ರಾಜ ಮಹಾರಾಜರು ಮಾಡಿದಾಗ ಅದು ರಾಜ್ಯದ ಶಕ್ತಿಯ ಅಭಿವೃದ್ದಿ ಎಂದು ಪ್ರತಿಬಿಂಬಿಸಲ್ಪಟ್ಟಿತ್ತು. ಆದರೆ ಜನಸಾಮಾನ್ಯರು ತಮ್ಮ ಆಸ್ತಿ ವಿಸ್ತರಣೆಯನ್ನು ಸರ್ಕಾರಿ ಜಾಗದಲ್ಲಿಯಾಗಲಿ ಬೇರೆಯವರ ಜಾಗದಲ್ಲಿಯಾಗಲಿ ಮಾಡಿದರೆ ಅದು ಒತ್ತುವರಿ ಜಾಗವೆಂದು ಕರೆಯಲ್ಪಟ್ಟಿತು. ಈಗಲೂ ಕೆಲವು ಘಟಭದ್ರರು ರಾಜಮಹಾರಾಜರ ಪಂಕ್ತಿಯಲ್ಲಿ ಇರಬೇಕೆಂಬುವ ಹಮ್ಮಿನೊಂದಿಗೆ ಒತ್ತುವರಿಯನ್ನು ಒಪ್ಪಿಕೊಳ್ಳಲಾಗದೆ ರಾಜಕೀಯ ನೆರಳಲ್ಲಿ ಇರುವುದು ಒಂದು ಸೋಜಿಗದ ಸಂಗತಿ ಎಂದರೆ ತಪ್ಪಾಗಲಾರದು. ರಸ್ತೆ ಮತ್ತು ಅದರ ವ್ಯಾಪ್ತಿ, ಮುನಿಸಿಪಾಲಿಟಿ ಮತ್ತು ಅದರ ಆದ್ಯ ಕರ್ತವ್ಯದ ಬಗ್ಗೆ ವ್ಯಾಜ್ಯಗಳು ಉದಯವಾಗುತ್ತಲೇ ಇವೆ.

೨. ಕಾನೂನು ಪುಟಗಳನ್ನು ೧೯೦೦ ಇಸವಿಯ ಮುಂಚೆಗೆ ತಿರುವಿದಾಗ ಮುನಿಸಿಪಾಲಿಟಿ ಕರ್ತವ್ಯವನ್ನು ನೆನಪಿಸಿ ಹೊರಡಿಸಿದ ತೀರ್ಪಿನ ಪೈಕಿ ಅಟಾರ್ನಿ ಜನರಲ್ - ಸುಂದರ್ ಲ್ಯಾಂಡ್ ಕಾರ್ಪೋರೇಷನ್ ೧೮೭೫-೭೬ ರಲ್ಲಿ ಮಹತ್ವದ ತೀರ್ಪನ್ನು ನೀಡಿ ಮುನಿಸಿಪಾಲಿಟಿಯು ಸಾರ್ವಜನಿಕ ಪಾರ್ಕುಗಳು, ತೋಟಗಳು, ವೃತ್ತಗಳು ಮತ್ತು ರಸ್ತೆಗಳನ್ನು ಟ್ರಷ್ಠಿ ಯಂತೆ ಜವಾಬ್ದಾರಿ ಯುತವಾಗಿ ನಿರ್ವಹಿಸುವಂತೆ ಆದೇಶಿಸಲಾಗಿದೆ. ಈಗಲೂ ಅನೇಕ ನ್ಯಾಯಾಲಯಗಳ ತೀರ್ಪುಗಳಲ್ಲಿ ಈ ಆದೇಶವು ಉಲ್ಲೇಖಿತವಾಗುತ್ತಿದೆ.

೩. ಕರ್ನಾಟಕದ ಉಡುಪಿ ಮುನಿಸಿಪಾಲಿಟಿ ಮೇಲೆ ಕೆ.ಆರ್.ಶನೈ ಎಂಬುವವರು ಸುಪ್ರೀಮ್ ಕೋರ್ಟಿನ ಮುಂದೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಉಡುಪಿ ಮುನಿಸಿಪಾಲಿಟಿ ವಸತಿ ಪ್ರದೇಶದಲ್ಲಿ ಸಿನಿಮಾ ಹಾಲ್ ಕಟ್ಟಲು ಲೈಸೆನ್ಸ್ ನೀಡಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ ನಡೆದು ಕೊಂಡಿದೆ ಎಂಬುದು ಅವರ ಅರೋಪ. ಮಾನ್ಯ ನ್ಯಾಯಾಲಯ ಸದರಿ ಬಿಲ್ಡಿಂಗ್ ಪ್ಲಾನ್ ಮತ್ತು ಬೈಲಾ ಉಲ್ಲಂಘಿಸಿ ಲೈಸೆನ್ಸ್ ನೀಡುವುದು ಕಾನೂನು ಭಾಹಿರ ಕ್ರಮ ಎಂದು ಸದರಿ ಲೈಸೆನ್ಸ್ ರದ್ದು ಪಡಿಸಿತ್ತು. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೭೪ ಎಸ್.ಸಿ. ೨೧೭೭ ರಲ್ಲಿ ನೋಡಬಹುದಿರುತ್ತದೆ.

೪. ಬೆಂಗಳೂರು ಮೆಡಿಕಲ್ ಟ್ರಸ್ಟ್ ಮತ್ತು ಬಿ.ಎಸ್. ಮುದ್ದಪ್ಪ ರವಾರ ನಡುವೆ ಮಾನ್ಯ ಸುಪ್ರೀಮ್ ಕೋರ್ಟಿನ ಮುಂದೆ ಇದ್ದ ವ್ಯಾಜ್ಯ ಪ್ರಕರಣವನ್ನು ಪರಿಹರಿಸಿದ ನ್ಯಾಯಾಲಯ ಪಾರ್ಕಿನ ಪ್ರದೇಶದಲ್ಲಿ ಕಾಲೇಜು ನಿರ್ಮಾಣಮಾಡಿ ಪರಿಸರ ಹಾಳು ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತು. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೯೧ ಎಸ್.ಸಿ. ೧೯೦೨ ರಲ್ಲಿ ನೋಡಬಹುದಿರುತ್ತದೆ.

೫. ಖಾಸಗಿಯವರ ಪಾರ್ಕಿಂಗ್ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಖಾಸಗಿ ವ್ಯಾಜ್ಯವಾಗಲಾರದು ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎಂಬ ತೀರ್ಪನ್ನು ಮಾನ್ಯ ಸುಪ್ರೀಮ್ ಕೋರ್ಟಿನ ಮುಂದೆ ಬಂದ ದೆಬಶೀಶ್ ರಾಯ್ ಮತ್ತು ಕಲ್ಕತ್ತಾ ಮುನಿಸಿಪಲ್ ಕಾರ್ಪೊರೇಷನ್ (೨೦೦೫ (೧೨) ಎಸ್.ಸಿ.ಸಿ. ೩೧೭) ರಲ್ಲಿ ನೀಡಲಾಗಿದೆ. ಪ್ಲಾನಿನಲ್ಲಿ ಪಾರ್ಕಿಂಗ್ ಜಾಗ ತೋರಿಸಿ ಅಲ್ಲಿಯೂ ಮಳಿಗೆ ನಿರ್ಮಾಣ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಬಿಲ್ಡಿಂಗೂ ನಮ್ಮ ಜಾಗ ಎನ್ನುವ ಹಾಗಿಲ್ಲ ಯಾವುದೇ ಸಾರ್ವಜನಿಕರೂ ಈ ಬಗ್ಗೆ ಪ್ರಶ್ನಿಸಬಹುದಾಗಿದೆ.

೬. ಮಂಗಳೂರು ಮುನಿಸಿಪಾಲಿಟಿ ಮತ್ತು ಮಹದೇವಜಿ ರವರ ನಡುವೆ ನಡೆದ ವ್ಯಾಜ್ಯದಲ್ಲಿ ಮಾನ್ಯ ಸುಪ್ರೀಮ್ ಕೋರ್ಟಿ ಮಹತ್ವದ ಅಂಶದ ಬಗ್ಗೆ ಬೆಳಕು ಚೆಲ್ಲಿತ್ತು. ಹೆದ್ದಾರಿ ಅಳತೆಯು ಬಳಕೆಯು ಎಲ್ಲಿವರೆಗೆ ಉಪಯೋಗದಲ್ಲಿದೆಯೋ ಅದು ಒಳಗೊಂಡಿದೆ. ಪಕ್ಕದ ಜಮೀನು ರಸ್ತೆಯ ಬಾಗದಲ್ಲಿ ಸೇರ್ಪಡೆಯಾಗುತ್ತದೆ ಕಾರಣ ಅದು ರಸ್ತೆ ನಿರ್ವಹಣೆಗೆ ಅವಶ್ಯವಾಗಿರುತ್ತದೆ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೬೫ ಎಸ್.ಸಿ. ೧೧೪೭ ರಲ್ಲಿ ನೋಡಬಹುದಿರುತ್ತದೆ.

೭. ಸುಪ್ರೀಮ್ ಕೋರ್ಟಿನ ಮುಂದೆ ಬಂದ ಇನ್ನೊಂದು ವ್ಯಾಜ್ಯದಲ್ಲಿ ಅಂದರೆ ಉತ್ತರ ಪ್ರದೇಶ ರಾಜ್ಯ ಮತ್ತು ಅತಾ ಮಹಮದ್ ಎಂಬ ಕೇಸಿನಲ್ಲಿ ಇನ್ನು ಮುಂದುವರಿದು ಮುನಿಸಿಪಾಲಿಟಿ ರಸ್ತೆಯನ್ನು ರಸ್ತೆಯನ್ನಾಗಿ ಮಾತ್ರ ಉಪಯೋಗಿಸಬೇಕು ಬೇರಾವುದಕ್ಕೂ ಅಲ್ಲ. ಫುಟ್ಪಾತು, ವಾಣಿಜ್ಯ ಮಳಿಗೆಗಳ ಮುಂದೆ ಇರುವ ವರಾಂಡ ಸಾರ್ವಜನಿಕ ರಸ್ತೆಯ ವ್ಯಾಪ್ತಿಯಲ್ಲಿ ಸೇರುತ್ತದೆ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೮೦ ಎಸ್.ಸಿ. ೧೭೮೫ ರಲ್ಲಿ ನೋಡಬಹುದಿರುತ್ತದೆ.

೮. ಗೋಬಿಂದ್ ಪ್ರಶಾದ್ ಮತ್ತು ನವದೆಹಲಿ ಮುನಿಸಿಪಲ್ ಕಮಿಟಿ ನಡುವೆ ನಡೆದ ವ್ಯಾಜ್ಯದಲ್ಲಿ ಮಾನ್ಯ ಸುಪ್ರೀಮ್ ಕೋರ್ಟ್ ಇನ್ನು ಮುಂದುವರಿದು ವಾಣಿಜ್ಯ ಮಳಿಗೆಗಳನ್ನು ಮತ್ತು ಇತರೆ ಸಾರ್ವಜನಿಕರ ಬಳಕೆಯ ಕಟ್ಟಡ ಕಟ್ಟುವ ಮಾಲೀಕನು ಸಾರ್ವಜನಿಕರು ಬಳಸುವ ಜಾಗ, ಪ್ಯಾಸೇಜ್, ವರಾಂಡ, ಫುಟ್ ಪಾತ್, ಓಣಿ ಬಿಡುತ್ತಾನೆಯೋ ಆದು ಸಾರ್ವಜನಿಕ ರಸ್ತೆಯಾಗುತ್ತದೆ. ಸದರಿ ಜಾಗವನ್ನು ಸಾರ್ವಜನಿಕವಾಗಿ ಉತ್ತಮ ಉಪಯೋಗಕ್ಕೆ ಘೋಷಣೆಯಾದರೆ ಸದರಿ ಜಾಗದ ಮಾಲೀಕನು ಅದಕ್ಕೆ ಪರಿಹಾರ ಕೋರಲು ಬರುವುದಿಲ್ಲ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೯೩ ಎಸ್.ಸಿ. ೨೩೧೩ ರಲ್ಲಿ ನೋಡಬಹುದಿರುತ್ತದೆ.

೯. ತಮಿಳುನಾಡಿನ ನದಿ ತೀರದಲ್ಲಿ ಹೋಟೆಲ್ ಉಧ್ಯಮವನ್ನು ಸ್ಥಾಪಿಸಲು ಹೊರಟ ಪ್ಲೆಸೆಂಟ್ ಸ್ಟೇ ಹೋಟೆಲ್ ಮತ್ತು ಅದಕ್ಕೆ ವಿರೋದ ಪಡಿಸಿದ ಸ್ಥಳೀಯ ಯೋಜನಾ ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳ ಶಿಫಾರಸ್ಸು ಬರುತ್ತದೆ. ನಗರ ಕಟ್ಟಡ ನಿರ್ಮಾಣಗಳಲ್ಲಿ ಪರಿಸರದ ಹಾನಿ ಮಾಡುತ್ತ ಯೋಜನಾ ಬೆಳವಣಿಗೆಗೆ ಅಡ್ಡ ಬರುವ ಈ ಬಗ್ಗೆಯ ಉನ್ನತ ಶಿಫಾರಸ್ಸುಗಳನ್ನು ಮಾನ್ಯ ಸುಪ್ರೀಮ್ ಕೋರ್ಟ್ ಖಂಡಿಸಿರುತ್ತದೆ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ೧೯೯೫ (೬) ಎಸ್.ಸಿ.ಸಿ ೧೨೭ ರಲ್ಲಿ ನೋಡಬಹುದಿರುತ್ತದೆ.

೧೦. ಡಾ ಕಜೂರಿಯ ಕೇಸಿನಲ್ಲಿ (ಎ.ಐ.ಆರ್. ೧೯೯೬ ಎಸ್.ಸಿ. ೨೫೩) ಮಾನ್ಯ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನಲ್ಲಿ ಹೀಗೆ ಹೇಳಲಾಗಿದೆ. ಎಲ್ಲಿ ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆಯೋ ಅಲ್ಲಿ ಸಂಬಂದಿಸಿದ ಕಟ್ಟಡಗಳ ಉದಯಕ್ಕೆ ಕಾರಣರಾದ ಅಧಿಕಾರಿಗಳನ್ನು ಹಾಗೆ ಬಿಡಲಾಗುತ್ತಿದೆ ಇದು ನಡೆಯಬಾರದು, ಅಂತಹ ಕಟ್ಟಡ ನಿರ್ಮಾಣ ಮಾಡಿ ಅನುಬವದಲ್ಲಿರುವವನಿಗಿಂತಲೂ, ಅದನ್ನು ಮೇಲೇಳಲು ಬಿಟ್ಟ ಅಧಿಕಾರಿಯನ್ನು ಕಾನೂನಿನ ರೀತ್ಯ ಶಿಕ್ಷೆಗೆ ಗುರಿಪಡಿಸುವುದು, ಸದರಿ ಕಾನೂನು ಭಾಹಿರ ನಿರ್ಮಾಣಗಳ ಮೂಲ ಸರಿಪಡಿಸಿದಂತೆ ಆಗುತ್ತದೆ, ಇಲ್ಲವಾದರೆ ಮುಂದೆ ಅಧಿಕಾರಿಗಳು ಜವಾಬ್ದಾರಿ ಇಲ್ಲದೆ ನಡೆದುಕೊಳ್ಳುವುದಕ್ಕೆ ದಾರಿಯಾಗುತ್ತದೆ.

೧೧. ಎಂ.ಐ. ಬಿಲ್ಡರ್ಸ್ ಮತ್ತು ರಾದೇ ಶ್ಯಾಮ್ ಸಾಹು ( ೧೯೯೯ (೬) ಎಸ್.ಸಿ.ಸಿ. ೪೬೪ ) ರಲ್ಲಿ ಹೇಳಿರುವಂತೆ ವಾಣಿಜ್ಯ ಕಟ್ಟಡಗಳು ಅನಧಿಕೃತ ಕಟ್ಟಡಗಳಲ್ಲಿ ನಡೆಯುವುದು ಸ್ಥಳೀಯವಾಗಿ ಹೆಚ್ಚಿನ ಹೊರೆಯಾಗುತ್ತದೆ ಪ್ರಾರ್ಥಮಿಕ ಕಾರ್ಯವಾಗಿ ನ್ಯಾಯಾಲಯವು ಅಂತಹ ನಕಾರಾತ್ಮಕ ಬೆಳವಣಿಗೆಯ ನ್ನು ತೆರವು ಗೊಳಿಸುವುದಕ್ಕೆ ಆಧ್ಯತೆ ನೀಡಿ ಅದರಿಂದ ಉಂಟಾಗಬಹುದಾದ ಪರಿಸರ ಸಮಸ್ಯೆಗಳಾದ ಹೆಚ್ಚು ಜನಸಂದಣಿ ಮತ್ತು ಸಂಚಾರ ತಡೆಯಬಹುದಾಗಿದ್ದು ಈ ಬಗ್ಗೆ ಸದರಿ ಅನಧಿಕೃತ ಕಟ್ಟಡ ನಿರ್ಮಾಣವಾದ ಬಗ್ಗೆ ತನಿಕೆಯನ್ನು ನಡೆಸಿ ಅಪರಾಧಿಗಳನ್ನು ಕಾನೂನಿನ ಪರಿಮಿತಿಗೆ ತರುವಂತೆ ಮತ್ತು ಕೇವಲ ಹೊಡೆದುಹಾಕುವಿಕೆಗೆ ಮಾತ್ರ ತೀರ್ಪು ಸೀಮಿತಗೊಳಿಸದಂತೆ ನಿರ್ದೇಶನ ನೀಡಿದೆ.

೧೨. ಎಂ.ಸಿ. ಮೆಹೆತಾ ಮತ್ತು ಯೂನಿಯಾನ್ ಆಫ್ ಇಂಡಿಯಾ ( ೧೬-೦೨-೨೦೦೬ ರಲ್ಲಿನ ತೀರ್ಪು) ಮಾನ್ಯ ಸುಪ್ರೀಮ್ ಕೋರ್ಟ್ ಬಹಳ ವಿಸ್ತಾರವಾಗಿ ಚರ್ಚಿಸಿದೆ. ವಸತಿ ಮತ್ತು ವಾಣಿಜ್ಯದ ಕಟ್ಟಡಗಳ ವಿಸ್ತಾರ ಮತ್ತು ಬಳಕೆ ಸಾಂದ್ರತೆ ಕುಡಿಯುವ ನೀರು, ಚರಂಡಿ ಮತ್ತು ಶೌಚ ವ್ಯವಸ್ಥೆಗಳ ಬಗ್ಗೆ ಹೆಚ್ಚು ಒತ್ತಡ ತರುತ್ತದೆ. ಮಾಸ್ಟರ್ ಪ್ಲಾನುಗಳು ಮುಂದಾಲೋಚನೆಯಲ್ಲಿ ತಜ್ಞರ ಸಹಾಯದಿಂದ ಆರೋಗ್ಯಕರ ಜೀವನ, ಉತ್ತಮ ಪರಿಸರ, ಶ್ವಾಸಯುಕ್ತ ಜಾಗ, ಭೂ ಉಪಯೋಗದ ಸಾಂದ್ರತೆ, ವಾಣಿಜ್ಯ, ಗೃಹ-ಕೈಗಾರಿಕೆ ಮತ್ತು ವಸತಿ ಉಪಯೋಗದ ಪ್ರತ್ಯೇಕತೆ, ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ತಯಾರು ಮಾಡಲಾಗಿರುತ್ತದೆ. ಅದರ ಜಾರಿ ಮಾಡುವುದು ಕಠಿಣವಾದರೂ ಅದರ ಉಲ್ಲಂಘನೆಯಿಂದ ಪರಿಸರದ ಮತ್ತು ಆರೋಗ್ಯ ಹಾನಿಯು ಕಾನೂನು ಪಾಲಕ ಪ್ರಜೆಗೆ ಒದಗಿರುವುದು ನ್ಯಾಯಾಲಯದ ಗಮನಕ್ಕೆ ಬಂದರೆ ಮೂಕ ಪ್ರೇಕ್ಷಕವಾಗದು. ಹೆಚ್ಚುವರಿ ಸಮಸ್ಯೆಗಳು ಈ ಬಗ್ಗೆ ತೊಡಕಾಗದು. ಅನಧಿಕೃತ ಕಟ್ಟಡಗಳ ಮತ್ತು ದುರುಪಯೋಗದ ಸಮಸ್ಯೆಗಳನ್ನು ತಡೆಯಲು ಬಹಳಷ್ಟು ಕಾನೂನು ರೂಪಿತವಾಗಿದ್ದರೂ ಅಂತಹ ಕಾನೂನು ಭಾಹಿರ ಕಾಮಗಾರಿಗಳು ಮತ್ತು ದುರ್ಬಳಕೆಗಳು ಹೆಚ್ಚುತ್ತಲೇ ಇವೆ, ಇದು ಕಾನೂನು ಜಾರಿಗೊಳಿಸದೆ ಇರುವುದು ಮತ್ತು ಕೋರ್ಟಿನ ಆದೇಶಗಳನ್ನು ಪಾಲಿಸದೆ ಇರುವುದು ತೋರುತ್ತದೆ, ಇದು ಕನೂನು ಕಡಗಣನೆಯಾಗಿದೆ. ಆದ್ದರಿಂದ ಈ ಸ್ಥಿತಿಗೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಕ್ರಮಕೈಗೊಳ್ಳುವುದು ನಡೆಯ ಬೇಕಿರುತ್ತದೆ. ಏಕೆಂದರೆ ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಇಂತಹ ಸ್ಥಿತಿ ಉದ್ಬವವಾಗದು ಎಂಬ ಇನ್ನು ಅನೇಕ ಕಟ್ಟೋರ ಶಬ್ದಗಳಲ್ಲಿ ಎಚ್ಚರಿಕೆಯನ್ನು ರಾವಾನಿಸಿದೆ.
೧೩. ಕರ್ನಾಲ್ ಮುನಿಸಿಪಲ್ ಕಮಿಟಿ ಮತ್ತು ನಿರ್ಮಲದೇವಿ ಕೇಸಿನಲ್ಲಿ (ಎ.ಐ.ಆರ್. ೧೯೯೬ ಎಸ್.ಸಿ. ೮೯೨) ಎಂಬ ಕೇಸಿನಲ್ಲಿ ಒತ್ತುವರಿ ಮಾಡಿ ಕಟ್ಟಲಾಗಿದ್ದ ಅಂಗಡಿಯ ತೆರವು ಗೊಳಿಸಲು ನೋಟೀಸು ನೀಡಲಾಗಿತ್ತು, ಅದನ್ನು ತೆರವು ಗೊಳಿಸದೆ ಇದ್ದದಕ್ಕೆ ನಗರಸಭೆ ವತಿಯಿಂದ ತೆರವು ಗೊಳಿಸಲಾಯಿತು. ಸದರಿ ಕಾರಣಕ್ಕೆ ಮುನಿಸಿಪಾಲಿಟಿಯಿಂದ ನಷ್ಟ ಪರಿಹಾರ ಕೋರಿ ದಾವೆ ಹೂಡಿದರು, ಸದರಿ ದಾವೆಯನ್ನು ಕೆಳ ನ್ಯಾಯಾಲಯ ವಜಾಮಾಡಿತ್ತು, ಅಪೀಲಿನಲ್ಲಿ ಜಿಲ್ಲಾ ನ್ಯಾಯಾಲಯ ೨೦ ಸಾವಿರ ಪರಿಹಾರ ನೀಡಿತ್ತು. ಹೈಕೋರ್ಟಿನ ಮುಂದೆಯೂ ಮುನಿಸಿಪಾಲಿಟಿ ಅಪೀಲು ವಜಾ ಆಯಿತು ನಂತರ ಸುಪ್ರೀಮ್ ಕೋರ್ಟ್ ಮೊರೆ ಹೋದ ಮುನಿಸಿಪಾಲಿಟಿಗೆ ಜಯ ಒದಗಿತು. ಸದರಿ ಕೇಸಿನಲ್ಲಿ ಮುನಿಸಿಪಾಲಿಟಿಯ ತೆರವು ಗೊಳಿಸುವ ಸದರಿ ಹಕ್ಕನ್ನು ಎತ್ತಿ ಹಿಡಿದ ನ್ಯಾಯಾಲಯ ಅಂತಹ ಕೇಸಿನಲ್ಲಿ ತೆರವು ಗೊಳಿಸುವ ಖರ್ಚನ್ನು ಸದರಿ ಒತ್ತುವರಿದಾರನಿಂದ ವಸೂಲಿ ಮಾಡಲು ಸೂಚಿಸಿತು. ಮುನಿಸಿಪಾಲಿಟಿ ತನ್ನ ಕಾಯ್ದೆ ಒಳಗಿನ ಅಧಿಕಾರವನ್ನು ಉಪಯೋಗಿಸಿರುವುದರಿಂದ ನಷ್ಟ ಪರಿಹಾರ ನೀಡುವುದು ಕಾನೂನು ಭಾಹಿರ ಎಂದು ತೀರ್ಪು ನೀಡಿದೆ.No comments:

CASE LAW ON LAND LAWS