CUSTOM SEARCH

ಈ ಬ್ಲಾಗಿನಲ್ಲಿ ದೊರೆಯಬಹುದಾದ ಮಾಹಿತಿ - BLOG ARCHIEVE

ಕಡತವೊಂದು ನಾಶಗೊಳಿಸಲ್ಪಟ್ಟ ಸಂದರ್ಭದಲ್ಲಿ - ಮಹಿತಿದಾರನಿಗೆ ಹೇಗೆ ಪ್ರತಿಕ್ರಿಯಿಸಬೇಕು

ಕರ್ನಾಟಕ ಸರಕಾರದ ಆದೇಶ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
(ಜನಸ್ಪಂದನ ಕೋಶ) ೩ನೇ ಮಹಡಿ,
ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ,
ಬೆಂಗಳೂರು, ದಿನಾಂಕ:೨೮-೩-೨೦೦೬

ಸುತ್ತೋಲೆ ಸಂಖ್ಯೆ: ಸಿಆಸುಇ ೧೬೫ ಮಾಹಅ ೨೦೦೫

ವಿಷಯ: ಕಡತವೊಂದು ನಾಶಗೊಳಿಸಲ್ಪಟ್ಟ ಸಂದರ್ಭದಲ್ಲಿ ಸದರಿ ಕಡತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೋರಿದಾಗ ಏನು ಕ್ರಮ ಜರುಗಿಸಬೇಕೆಂಬ ಬಗ್ಗೆ ಸೂಚನೆಗಳು.

ಸಾರ್ವಜನಿಕರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಕೋರಿದಾಗ ಆ ಮಾಹಿತಿಗೆ ಸಂಬಂಧಿಸಿದ ಕಡತ / ಪ್ರಕರಣ / ದಾಖಲಾತಿಗಳು ಕಚೇರಿಯ ಕಾರ್ಯವಿಧಾನದಂತೆ ನಾಶಗೊಳಿಸಲ್ಪಟ್ಟಿದ್ದಲ್ಲಿ ಮಾಹಿತಿ ಕೋರಿದ ವ್ಯಕ್ತಿಗೆ ಯಾವ ರೀತಿ ಮಾಹಿತಿ ನೀಡಬೇಕೆಂಬ ಬಗ್ಗೆ ಕೆಲವು ಇಲಾಖೆಗಳು ಸ್ಪಷ್ಠಪಡಿಸಲು ಕೋರಿದ್ದವು. ಈ ಅಂಶ ಕುರಿತು ಕಾನೂನು ಇಲಾಖೆಯೊಡನೆ ಸಮಾಲೋಚಿಸಲಾಗಿದೆ. ಕಾನೂನು ಇಲಾಖೆಯ ಅಭಿಪ್ರಾಯ ಕೆಳಕಂಡಂತಿದೆ:-

ಆಡಳಿತ ಇಲಾಖೆಯು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿರುತ್ತಾರೆ;
(೧) ನಾಶಗೊಳಿಸಲಾದ ಕಡತವನ್ನು ಪುನರ್ನಿರ್ಮಿಸಿ (by reconstructing) ಮಾಹಿತಿ ನೀಡಬೇಕೆ? ಹಾಗೂ ಇದು ಕಡ್ಡಾಯವೆ?
(೨) ಕಡತವನ್ನು ಪುನ: ನಿರ್ಮಿಸಲು ಸಾಧ್ಯವಿರದಿದ್ದಾಗ ಯಾವ ಕ್ರಮ ಅನುಸರಿಸಬೇಕು.

ಅಥವಾ

(೩) ಕಚೇರಿಯ ಸ್ಥಾಯೀ ಸೂಚನೆಗಳಂತೆ ( standing orders) ಅವಧಿಮೀರಿದ ಕಡತದಿಂದ ಕೋರಿದ ಮಾಹಿತಿಗಳನ್ನು ಕಡತವು ನಾಶಗೊಳಿಸಲ್ಪಟ್ಟಿದೆ ಎಂದು ಮಾಹಿತಿ ನಿರಾಕರಿಸಬಹುದೆ;
(೪) ಬೇರೆ ಯಾವ ಕ್ರಮವನ್ನು ಅನುಸರಿಸಬೇಕು?

"ಈಗ ಕೇಂದ್ರ ಸರ್ಕಾರ ಹೊರಡಿಸಿದ ಮಾಹಿತಿ ಹಕ್ಕು ಕಾಯ್ದೆ ೨೦೦೫ ಊರ್ಜಿತದಲ್ಲಿರುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ಮಾಹಿತಿ ಕೋರಿದಾಗ, ಆಡಳಿತ ಇಲಾಖೆಯು ಮಾಹಿತಿ ಹಕ್ಕು ಕಾಯ್ದೆ ೨೦೦೫ರ ಕಲಂ ೮ ಮತ್ತು ೯ ರಲ್ಲಿ ಉಲ್ಲೇಖಿಸಿರುವ ಆಧಾರದ ಮೇಲೆ ಮಾತ್ರ ಮನವಿಯನ್ನು ತಿರಸ್ಕರಿಸಬಹುದೆಂದು ೨೦೦೫ರ ಕೇಂದ್ರ ಅಧಿನಿಯಮ ತಿಳಿಸುತ್ತದೆ. ಒಂದು ವೇಳೆ ಕಡತವನ್ನು ನಾಶಗೊಳಿಸಿದ್ದರೆ. ಅದರಂತೆ ವಿವರವಾದ ಹಿಂಬರಹವನ್ನು ನೀಡಬೇಕಾಗುತ್ತದೆ. ೨೦೦೫ರ ಕೇಂದ್ರ ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮದ ಉಪಬಂಧಗಳನ್ನು ಪರಿಶೀಲಿಸಲಾಗಿ, ನಾಶಗೊಳಿಸಲಾದ ಕಡತಗಳನ್ನು ಪುನರ್ ನಿರ್ಮಿಸುವ ಬಗ್ಗೆ ಕಡತವನ್ನು ಪುನರ್ ನಿರ್ಮಿಸಲು ಸಾಧ್ಯವಿರದಿದ್ದಾಗ ಯಾವ ಕ್ರಮ ಅನುಸರಿಸಬೇಕು ಅಥವಾ ಕಚೇರಿಯ ಸ್ಥಾಯಿ ಸೂಚನೆಗಳಂತೆ (standing orders ) ಅವಧಿ ಮೀರಿದ ಕಡತದಿಂದ ಕೋರಿದ ಮಾಹಿತಿಗಳನ್ನು ಕಡತವು ನಾಶಗೊಳಿಸಲ್ಪಟ್ಟಿದೆ ಎಂದು ಮಾಹಿತಿಯನ್ನು ನಿರಾಕರಿಸಬಹುದೆ ಬೇರೆ ಯಾವ ಕ್ರಮವನ್ನು ಅನುಸರಿಸಬೇಕು? ಎಂಬುದರ ಕುರಿತು ಯಾವುದೇ ಪ್ರಾವಧಾನ ಮಾಡಲಾಗಿರುವಿದಿಲ್ಲ. ಒಂದು ವೇಳೆ ಕಡತವನ್ನು ನಾಶಗೊಳಿಸದರೆ, ಅದರಂತೆ ವಿವರವಾದ (ನಾಶಗೊಳಿಸಿದ ದಿನಾಂಕ, ನಾಶಗೊಳಿಸಲು ನೀಡಿದ ಆದೇಶ, ಇತ್ಯಾದಿ) ಹಿಂಬರಹವನ್ನು ನೀಡಬೇಕಾಗುತ್ತದೆ”


ಮೇಲಿನ ಅಂಶಗಳನ್ನು ಗಮನದಲ್ಲಿರಿಸಿ ಆಯಾ ಸಾರ್ವಜನಿಕ ಪ್ರಾಧಿಕಾರಗಳು ಸಂಬಂಧಪಟ್ಟ ಪ್ರಕರಣಗಳಲ್ಲಿ ಸೂಕ್ತನಿರ್ಧಾರ ತೆಗೆದುಕೊಳ್ಳಬಹುದೆಂದು ಈ ಮೂಲಕ ಸೂಚಿಸಲಾಗಿದೆ, ಕಾನೂನು ಇಲಾಖೆಯ ಅಭಿಪ್ರಾಯವನ್ನು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಾಗೂ ಮೇಲ್ಮನವಿ ಪ್ರಾಧಿಕಾರಗಳ ಗಮನಕ್ಕೆ ತರಬೇಕೆಂದು ಸಹ ಸೂಚಿಸಲಾಗಿದೆ.

ರಾಜೀವ್ ಚಾವ್ಲ
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪ್ರ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ)







No comments:

CASE LAW ON LAND LAWS