CUSTOM SEARCH

ಮಾಹಿತಿ ಹಕ್ಕು - ಸಂಘಟನೆಗಳ ಮತ್ತು ರಾಜಕಾರಣಿಗಳ ಪ್ರಯತ್ನದ ಹಾದಿ

ರಾಜಸ್ತಾನದ ಮಜದೂರ್ ಕಿಸಾನ್ ಶಕ್ತಿ ಸಂಘಟನೆ ಯ ಪಾಧಾಧಿಕಾರಿಗಳು ಮಾಡಿರುವ ಸಾಧನೆ ಅಪ್ರತಿಮವಾದದ್ದು. ಕಳೆದ ೧೫ ವರ್ಷಗಳಿಂದ ಕೆಳ ಹಂತದಲ್ಲಿ ರೈತರು ಮತ್ತು ಕಾರ್ಮಿಕರ ಹೋರಾಟಗಳಲ್ಲಿ ಮಾಹಿತಿ ಪಡೆಯಲು ನಡೆಸಿರುವ ದರಣಿ ಸತ್ಯಾಗ್ರಹ ಇಂದು ಸಾಕಷ್ಟು ಸಫಲತೆ ತಂದಿದೆ.


ಸಾಮಾಜಿಕ ಕಾರ್ಯಕರ್ತರು, ವಕೀಲರು, ಪತ್ರಕರ್ತರು, ನಿವೃತ್ತ ಅಧಿಕಾರಿಗಳು, ವೃತ್ತಿಪರರು ಸೇರಿಕೊಂಡು ೧೯೯೬ ರಲ್ಲಿ ದಿ ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್-ಫರ್ಮೇಷನ್. ಸ್ತಾಪಿಸಿದ್ದಾರೆ. ಸದರಿ ಸಂಸ್ಥೆಯ ಕೊಡುಗೆ ಅಪಾರ.

ಕೆಲವು ಕಡೆ ಜನರ ಒತ್ತಾಯ, ಕೆಲವು ಕಡೆ ಸಂಘಾನೆಗಳ ಬೇಡಿಕೆ, ಹೆಚ್ಚಿನದಾಗಿ ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಸಾಲ ನೀಡಲು ವಿಧಿಸಿದ್ದ ಕಂಡೀಶನ್ ಗಳು ಮಾಹಿತಿ ಹಕ್ಕು ಕಾಯ್ದೆ ರಾಜ್ಯಗಳಲ್ಲಿ ಜಾರಿಯಾಗಲು ಕಾರಣವಾಯಿತು.

ರಾಜಸ್ತಾನ, ಕರ್ನಾಟಕ, ದೆಹಲಿ ಯಲ್ಲಿ - ೨೦೦೦ ರಲ್ಲಿ

ಮಹಾರಾಷ್ಟ್ರದಲ್ಲಿ, ಮಧ್ಯಪ್ರದೇಶದಲ್ಲಿ, ಜಮ್ಮು ಕಾಶ್ಮೀರದಲ್ಲಿ - ೨೦೦೩ ರಲ್ಲಿ

ತಮಿಳುನಾಡಿನಲ್ಲಿ - ೧೯೯೭ ರಲ್ಲಿ

ಗೋವ ದಲ್ಲಿ - ೧೯೯೭ ರಲ್ಲಿ

ಕೇಂದ್ರ ಸರಕಾರ - ೨೦೦೫ ರಲ್ಲಿ


ಮಹಾರಾಷ್ಟ್ರ ಕಾನೂನು ಅತ್ಯಂತ ಮಾಹಿತಿ ಪಡೆಯುವವರಿಗೆ ಸಹಾಯಕವಾಗಿ ಪರಿಣಾಮಕಾರಿಯಾಗಿದ್ದರೆ ತಮಿಳುನಾಡು ಕಾನೂನು ಮಾಹಿತಿ ಹೇಗೆ ನಿರಾಕರಿಸಬಹುದು ಎಂದು ವಿಷೇಷತೆಯನ್ನು ಪಡೆದಿದೆ ಎಂದು ತಜ್ನರ ಅಭಿಪ್ರಾಯವಾಗಿದೆ.

ಕರ್ನಾಟಕ ಸರಕಾರ ೧೯೯೭ ರಲ್ಲಿ ಇಲ್ಲಾಖ ಆದೇಶಗಳನ್ನು ಹೊರಡಿಸಿ ಅಭಿವೃದ್ದಿ ಕಾರ್ಯಗಳಲ್ಲಿ ಖಡತಗಳನ್ನು ಸಾರ್ವಜನಿಕ ವೀಕ್ಷಣೆಗೆ ಮತ್ತು ಅದರ ದೃಡಿಕೃತ ನಖಲು ನೀಡಲು ಮುಂದಾಯಿತು ಇದು ಸರಕಾರಿ ಕಾರ್ಯದಲ್ಲಿ ಮೊದಲನೆ ಹೆಜ್ಜೆ.

ಕರ್ನಾಟಕ ಸರಕಾರ ೨೦೦೦ ನೇ ಇಸವಿಯಲ್ಲಿ ಕಾಯ್ದೆ ತಂದಿತಾದರೂ ೨೦೦೨ ರ ವರೆಗೆ ಜಾರಿಮಾಡಲಾಗಲಿಲ್ಲ. ೨೦೦೨ ರಲ್ಲಿ ನಿಯಮ ಜಾರಿ ಮಾಡಿ ಜಾರಿಗೆ ತಂದಿತಾದರು ಐದು ರೂಪಾಯಿ ಒಂದು ಎ೪ ಹಾಳೆಗೆ ವಿಧಿಸಿ ಸಾಮಾನ್ಯನ ಕೈಗೆಟುಕುವ ಹಾದಿ ತಪ್ಪಿಸಿತು. ಈಗ ೨೦೦೫ ರ ತಿದ್ದುಪಡಿ ನಂತರ ಕೇಂದ್ರ ಸರಕಾರಿ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದೆ.

ರಾಜಕಾರಣಿಗಳ ಪೈಕಿ ಮಾಜಿ ಪ್ರದಾನಿ ವಿ.ಪಿ.ಸಿಂಗ್ ರವರು ಮಾಹಿತಿ ಹಕ್ಕು ಮಹತ್ವ ವನ್ನು ಒತ್ತಿ ಹೇಳಿದರಾದರೂ ಅದಕ್ಕೆ ಬೆಂಬಲವಿಲ್ಲದೆ ರಾಜಕೀಯ ಇಚ್ಚಾಶಕ್ತಿ ಇಲ್ಲದೆ ಫಲ ಕಾಣಲಿಲ್ಲ.

ವಾಜಪೇಯಿಯವರು ಪ್ರಪ್ರಥಮ ಕಾನೂನು ಹೊರಡಿಸಿದರಾದರೂ ಜಾರಿ ಮಾಡಲು ರಾಜಕೀಯ ಇಚ್ಚಾಶಕ್ತಿ ತೋರಲಿಲ್ಲ.

ಇಂದಿನ ಯು.ಪಿ.ಎ. ಸರಕಾರ ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಸದರಿ ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿತರಲು ನಿರ್ಣಯಿಸಿದ್ದರಿಂದ ಇಂದು ನಾವು..... ಮಾಹಿತಿ ಹಕ್ಕು ಈ ರೀತಿಯಾಗಿ ಬೆಳೆಯುವುದಕ್ಕೆ ಕಾರಣವಾಗಿದೆ. ಇದು ಮನ್ ಮೋಹನ್.... ಸಿಂಗ್ ರವರಿಗೆ ಸಲ್ಲ ಬೇಕಾದ ಕೀರ್ತಿ.

No comments:

CASE LAW ON LAND LAWS