CUSTOM SEARCH

ಸಮಾಜ ಸೇವೆಯಲ್ಲಿ ಮನುಜರ ಅರಿಯಲು ಮೋಸಹೋಗುವುದು ಅನಿವಾರ್ಯವೆ


ವಕೀಲ ವೃತ್ತಿಯಲ್ಲಿ ಸಮಾಜದ ಬಹುಮುಖ ವ್ಯಕ್ತಿತ್ವಗಳನ್ನು ಕಾಣುವ ಸದಾವಕಾಶ ದೊರೆತಿದ್ದರಿಂದ ನನಗೆ ಅರಿವಿಲ್ಲದೆ ಸಮಾಜದ ಅನೇಕ ಸಮಸ್ಯೆಗಳ ಬಗ್ಗೆ ಸ್ವಂದಿಸುತ್ತ ಕಾನೂನು ಬದ್ದವಾಗಿ ಪ್ರತಿಕ್ರಿಯಿಸುತ್ತ ಸಾಗಿದ ನನಗೆ ಈ ಸಮಾಜ ಸೇವೆಯಲ್ಲಿ ಎದುರಾದ ಕೆಲವಾರು ವಿಕೃತಿಗಳ ಬಗ್ಗೆ ಹೇಳಲು ಮನಸ್ಸು ಈ ಲೇಖನಿಯೊಂದಿಗೆ ಇಂದು ಮುಂದಾಗಿದೆ.

ಒಂದು ದಿನ ಕಚೇರಿಯಲ್ಲಿ ಕಾನೂನು ಪುಸ್ತಕದ ಜ್ಞಾನದಲ್ಲಿ ಸಮಸ್ಯೆಯೊಂದರ ಬಗ್ಗೆ ಪರಿಹಾರಕ್ಕೆ ತಳಹದಿಯನ್ನು ಹುಡುಕುತ್ತಿದ್ದಾಗ ನನ್ನ ಗುರುವಿನ ಕಕ್ಷಿದಾರರೊಬ್ಬರು ಬಂದರು. ಯಾವುದಕ್ಕೆ ಗುರುವಿನ ಬಳಿ ಸ್ಪಂದನೆ ದೊರೆಯುವುದಿಲ್ಲವೋ ಅಂತಹ ಕೆಲಸಗಳನ್ನು ಯುವಕ ಶಿಷ್ಯರಿಗೆ ಹೇಳಿ ಹುರಿದುಂಬಿಸುವ ಪರಿಪಾಟದ ಈ ಸಮಾಜದಲ್ಲಿ ನನಗೂ ಅಂತಹ ಅವಕಾಶ ಬಂದೊದಗಿತು. ಅಂದು ಮುನಿಸಿಪಲ್ ತೆರಿಗೆಯನ್ನು ಹೆಚ್ಚಿಸುವುದಕ್ಕೆ ಕಾನೂನು ತಿದ್ದುಪಡಿ ಮಾಡಿದ ಸಮಯ, ಈ ಬಗ್ಗೆ ಸದರಿ ಕಾನೂನಿನ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡುವಂತೆ ಮಾಡಿತು. ಕೆಲವಾರು ಸಂಘಸಂಸ್ಥೆಗಳು ನನ್ನನ್ನು ಆಹ್ವಾನಿಸಿದವು ಅಲ್ಲಿ ಕಾನೂನಿನ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ತಿಳಿಸಬೇಕಿತ್ತು. ಹೀಗೆ ಸಾರ್ವಜನಿಕ ಸಂಪರ್ಕಕ್ಕೆ ಬರುವ ಹೊತ್ತಿಗೆ ಈ ಸಮಾಜದ ಅನೇಕ ಅಂಕು ಡೊಂಕುಗಳ ಬಗ್ಗೆ ನನ್ನಿಂದ ಕಾನೂನು ಸಲಹೆಯನ್ನು ಅರಸಿ ಅನೇಕರು ಮುಂದೆ ಬಂದರು. ಹೀಗೆ ಸಂಪರ್ಕದಲ್ಲಿ ಇರುವಾಗಲೇ ತುಮಕೂರಿನ ಶಾಸಕ ಎಸ್. ಶಿವಣ್ಣ ಎಂಬುವವರ ಬಗ್ಗೆ ಅವರ ಬಗ್ಗೆ ಅನೇಕ ಕೆಟ್ಟವಿಚಾರಗಳನ್ನು ಹಲವು ವ್ಯಕ್ತಿಗಳು ಹಿಂದೆ ಅವರ ಹಿಂದೆಯೇ ಸುತ್ತಿದಂತ ವ್ಯಕ್ತಿಗಳು ನನ್ನ ಗಮನಕ್ಕೆ ತಂದರು. ಇದರ ಸತ್ಯಾಸತ್ಯತೆ ಬಗ್ಗೆ ವಿಚಾರಿಸಲು ಹೋಗಲಿಲ್ಲ. ಆದರೆ ಆ ವ್ಯಕ್ತಿಯ ನಾಲಿಗೆ ಶುದ್ದವಿಲ್ಲದನ್ನು ಕಂಡು ತಿಳಿದಿದ್ದೆ. ಆತನ ವಯುಕ್ತಿಕ ವಿಚಾರ ತಿಳಿದಿರಲಿಲ್ಲ.

ತುಮಕೂರಿನ ಹಲವು ವ್ಯಕ್ತಿಗಳು ಈ ಶಿವಣ್ಣನ ಬಗ್ಗೆ ಕೆಟ್ಟದ್ದನ್ನು ಹೇಳಿದರೆ ಹೊರತು ಆತನ ಕೆಲವು ಒಳ್ಳೆ ಗುಣಗಳನ್ನು ಹೇಳಲಿಲ್ಲ. ಯಾವುದೇ ವ್ಯಕ್ತಿಯು ಹುಟ್ಟಿನಿಂದ ನೀಚನಲ್ಲಿ/ಕ್ರಿಮಿನಲ್ ಅಲ್ಲ/ ಅವನ ಪರಿಸರ ಅವನ ಇಂದಿನ ಸ್ಥಿತಿಗೆ ಕಾರಣವಾಗುತ್ತೆ ಎಂದು ನಂಬಿದ್ದ ನನಗೆ ಈ ವ್ಯಕ್ತಿಯ ಬಗ್ಗೆ ಆ ಅಭಿಪ್ರಾಯಕ್ಕೆ ಬರಲು ಆಗಲಿಲ್ಲ. ಆದರೆ ಈ ವ್ಯಕ್ತಿಯ ಬಗ್ಗೆ ಅನೇಕ ಅಂಶಗಳನ್ನು ಹೇಳುವ ವ್ಯಕ್ತಿಗಳು ನನ್ನಿಂದ ಅನೇಕ ಕಾನೂನು ಅಸ್ತ್ರಗಳನ್ನು ತೆಗೆದುಕೊಂಡು ತಮ್ಮ ಸ್ವಾರ್ಥಕ್ಕೆ ಬಳಿಸಿಕೊಂಡಿದ್ದು ನನ್ನ ಕಣ್ಣಾರೆ ಕಂಡ ನನಗೆ ಉಂಟಾಗಿದ್ದೇ ಬಹು ದೊಡ್ಡ ವಿಶ್ವಾಸ ದ್ರೋಹದ ಅಗಾಥ. ಶತ್ರು ಕೆಟ್ಟವನಾದರೂ ನನ್ನ ಬಗ್ಗೆ ಕೆಟ್ಟದ್ದನ್ನು ಅಲೋಚಿಸಲಿಲ್ಲ. ಆದರೆ ಶತ್ರುವಿನ ಶತ್ರುಗಳು ಮಾಡಿದ ಕೆಲಸ ನೋಡಿದ ನನಗೆ ಯಾರನ್ನೂ ನಂಬದಂತಹ ಮನಸ್ಥಿತಿ ಮತ್ತು ಸಮಾಜ ಸೇವೆಯ ಬಗ್ಗೆ ಜಿಗುಪ್ಸೆಯನ್ನು ಹೊಂದುವಂತಹ ಪರಿಸ್ಥಿತಿಗೆ ತಂದಿದೆ.

ನಾನು ಎಸ್.ಶಿವಣ್ಣ ಎಂಬ ಹಾಲಿ ಎಂ.ಎಲ್.ಎ ವಿರುದ್ದ ಮಾನ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದಾಗ ಅದನ್ನು ಯಾವುದೇ ಪ್ರಚಾರ ಬೇಡ ಕಾನೂನು ಪಾಲನೆ ಆಗಲಿ. ರಾಜಕಾರಣದಲ್ಲಿ ಆಸಕ್ತಿಯಿಲ್ಲದ ನನಗೆ ಏಕೆ ಬೇಕು ಪ್ರಚಾರ ಎಂದು ಮುಂದಾಗಿದ್ದಾಗಲೇ ಅದನ್ನು ದುರುಪಯೋಗ ಪಡಿಸಿಕೊಂಡು ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬರುವಂತೆ ಮಾಡಿದವರ ಪೈಕಿ ಕೆಲವು ರಾಜಕಾರಣಿಗಳು ಮತ್ತು ಬ್ರಷ್ಟ ಪತ್ರಕರ್ತರು ಶಾಮೀಲಾಗಿ ಸದರಿ ಎಸ್.ಶಿವಣ್ಣ ನವರ ಮೇಲೆ ನನ್ನ ಕಾನೂನು ಸಮರವನ್ನು ಅಸ್ತ್ರವನ್ನಾಗಿಸಿಕೊಂಡರು. ಇಲ್ಲಿ ಜೀವ ಭಯದ ಆತಂಕ ವುಂಟಗಿದ್ದು ನನಗೆ, ಆದರೆ ಅದನ್ನು ದುರುಪಯೋಗ ಪಡಿಸಿಕೊಂಡದ್ದು ಇತರರು ಎಂಬ ವಿಚಾರವು ನನ್ನ ಗಮನಕ್ಕೆ ಬಂದಾಗ ನನಗೆ ಬೇಸರ ಆಯಿತು. ಇದರಿಂದ ನನ್ನನ್ನು ತುಮಕೂರಿನ ಶಾಸಕರ ಶತ್ರುವಿನಂತೆ ಬಿಂಬಿಸಲಾಯಿತು. ಇದು ನನ್ನ ವೃತ್ತಿಗೆ ಮತ್ತು ಹಲವಾರು ಕೆಲಸಗಳಿಗೆ ತೊಂದರೆಯನ್ನುಂಟು ಮಾಡಿತು. ಸದರಿ ಶಿವಣ್ಣನ ಸುತ್ತಲಿನ ಚೇಲಾಗಳು ನನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳು ವದಂತಿಗಳನ್ನು ಒಂದು ಕಡೆ ಹಬ್ಬಿಸಿದರೆ. ಸದರಿ ಶಿವಣ್ಣನ ವೈರಿಗಳು ನನ್ನ ಪಕ್ಕದಲ್ಲಿಯೇ ಮುಂದುವರಿಯುತ್ತ ನನ್ನ ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತ ಉರಿಯುವ ಕೆಂಡಕ್ಕೆ ತುಪ್ಪವನ್ನು ಸುರಿದರು. ನನ್ನ ಹೋರಾಟದ ಹಾದಿಯನ್ನು ಯಾವುದೋ ವಯುಕ್ತಿಕ ದ್ವೇಷಗಳಿಗೆ ಬಳಕೆ ಮಾಡಿಕೊಂಡ ವ್ಯಕ್ತಿಗಳು, ನನ್ನಿಂದ ಪಡೆದ ಕಾನೂನು ಸಲಹೆ ಗಳಲ್ಲಿ ಮತ್ತು ಹಲವು ಕಾನೂನು ಮಾರ್ಗಗಳಲ್ಲಿ ಭ್ರಷ್ಟತೆಯಲ್ಲಿ ತೊಡಗಿ ಕಾರು ಜಮೀನು ಮಾಡಿಕೊಂಡ ಬಗ್ಗೆ ನಿರ್ದೇಶನಗಳು ನನ್ನ ಗಮನಕ್ಕೆ ಬಂದಾಗ ನಾನು ಎಲ್ಲಿದ್ದೇನೆ ಎಂದು ನನ್ನ ಅಸ್ತಿತ್ವವೇ ಕಳಚಿ ಬಿದ್ದಂತೆ ಆಗಿಹೋಯಿತು.

ನಾನು ನನ್ನ ಕಷ್ಟಾರ್ಜನೆಯಲ್ಲಿ ಮನೆ ಕಟ್ಟಿದ್ದು ವಾಸ್ತವ ಈಗಲೂ ಎಸ್.ಬಿ.ಎಂ ಶಾಖೆಯಲ್ಲಿ ಸಾಲವಿದೆ, ಆದರೆ ನನ್ನಿಂದ ಕಾನೂನು ಸಲಹೆ ಪಡೆದು ಹಣ ಮಾಡಿರುವ ಪಾಪಿಯೊಬ್ಬ ನನ್ನ ಬಗ್ಗೆ ಬೆಟ್ಟು ಮಾಡಿ ತೋರಿಸಿ ಆಡಿಕೊಂಡನಂತೆ, ಈ ಬಗ್ಗೆ ತಿಳಿದು ನೋವಾಯಿತು. ಸಮಾಜ ಸೇವೆಯಲ್ಲಿ ಪ್ರಾಮಾಣಿಕರಿಗೆ ಸ್ಥಳವಿಲ್ಲ ಎಂದು ನನ್ನನ್ನು ಹೊರಹಾಕಿದ ಹಲವಾರು ದುರ್ಜನರು ತಾವಿರುವುದೇ ಸತ್ಯ ಲೋಕ ವೆಂಬಂತೆ ವರ್ತಿಸುತ್ತಿದ್ದಾರೆ. ಆದರೆ ಅದೇ ಸತ್ಯದ ಹಾದಿಯಲ್ಲಿ ನಾನು ಅವರ ಬಣ್ಣದ ಲೋಕಕ್ಕೆ ಕಾನೂನಿನ ದಾಳವನ್ನು ಬೀಸಿದೆಡೆ ನುಚ್ಚು ನೂರಾದೀತು ಎಂಬ ಅರಿವು ಅವರಿಗಿಲ್ಲ. ಕಾನೂನು ಇರುವುದು ಅಮಾಯಕರನ್ನು ರಕ್ಷಿಸಲು, ದುರ್ಜನರನ್ನು ಅಪರಾಧಿಗಳನ್ನು ಶಿಕ್ಷಿಸಲು ಎಂಬ ನಂಬಿಕೆಯಲ್ಲಿದ್ದ ನನಗೆ ಅಮಾಯಕರ ಸೋಗಿನಲ್ಲಿ ಅಪರಾಧಿಗಳು ಮತ್ತು ಸಂಚು ರೂಪಿತರು ಇರುವುದನ್ನು ಕಂಡು ಹಲವಾರು ಬಾರಿ ಬೇಸರ ಆಯಿತು.

ಇದು ಬರೆಯಲೆಂಬಂತೆ ತೋರಿದಾ ಉತ್ಪ್ರೇಕ್ಷೆಯಲ್ಲ, ಆದರೆ ಮನದಲ್ಲಿ ಬಹಳ ದಿನದಿಂದ ಕಾಡುತ್ತ ಸಮಾಜ ಸೇವೆಯಲ್ಲಿ ಸ್ವಾರ್ಥ ಸಾದಕರನ್ನು ನನ್ನ ಬಳಿ ಬಿಟ್ಟುಕೊಂಡ ಸನ್ನಿವೇಶವ ನೆನೆದಾಗ ಮೈ ಜುಂ ಎನ್ನುವುದೊಂದೇ ಅಲ್ಲ, ಸಾಕು ಈ ಸಮಾಜ ಸೇವೆ, ಯಾರ ಕೈಯಲ್ಲಿ ಆಧೀತು ಈ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು, ಎಲ್ಲಿ ತಂದು ಬಿಟ್ಟರು ಈ ಬಾಲಂಗೋಚಿಗಳು, ಬಾಟಲಿಯಲ್ಲಿನ ಏಡಿಯಂತೆ ಕಾಲೆಳೆಯುವ ಸಹಪಾಟಿಗಳು, ಎಂಬ ಹತ್ತು ಹಲವು ಅನುಬವದೊಂದಿಗೆ ನನ್ನ ಸಮಾಜ ಸೇವೆಗೆ ಬ್ರೇಕ್ ಬಿದ್ದದ್ದರಲ್ಲಿ ಆಶ್ಚರ್ಯವಿಲ್ಲ.

ಸಮಾಜ ಸೇವೆ ಎಂದರೆ ಬಾಷಣಗಳಲ್ಲಿ ತೋರುವ ನಿಷ್ಟೆ ಅಲ್ಲ ತ್ಯಾಗ, ನಿಸ್ವಾರ್ಥ ಸೇವೆ, ದುಡಿಮೆಗೆ ವಿರಾಮ, ಸ್ವಂತ ಹಣಕಾಸು ವಿನಿಯೋಗ ಹೀಗೆ ಅನೇಕ ವೇಳೆ ಸಂಸಾರಿಕಾ ಜೀವನಕ್ಕೂ ಬಿಡುವಿಲ್ಲದ ಅಲೋಚನೆ ಯಾಗಿರುತ್ತೆ ಎಂದು ಅನುಭವದಿ ತಿಳಿದ ಎನಗೆ. ಇದರೊಳಗೆ ಗೋಸುಂಬೆಗಳು ನಮ್ಮ ಆಲೋಚನೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಕಂಡು ಹೇಸಿಗೆ ಅನ್ನಿಸಿತ್ತು. ನಮ್ಮ ನಿಸ್ವಾರ್ಥ ಸೇವೆಯಲ್ಲಿ ಒಡನಾಡಿಗಳ ಸ್ವಾರ್ಥ ಸಾದನೆ ನಮ್ಮನ್ನು ಸಮಾಜದ ದೃಷ್ಠಿಯಲ್ಲಿ ಮಲಿನರನ್ನಾಗಿಸಿದಾಗ ಮಾಡದ ಪಾಪಕ್ಕೆ ಮರುಗುವಂತಾಯಿತೆ ಎಲೆ ಬಡ ಮೂರ್ಖ ಜೀವವೆ ಎಂದು ಬಹಳ ಬಾರಿ ಎನ್ನನ್ನು ನಾನು ಜರಿದಿದ್ದು ನಿಜ.

ಮಾನ್ಯ ಲೋಕಾಯುಕ್ತರಿಗೆ ದೂರನ್ನು ಸಲ್ಲಿಸಲು ಅನೇಕರಿಗೆ ದೂರನ್ನು ಡ್ರಾಫ್ಟ್ ಮಾಡಿಕೊಟ್ಟಿದ್ದೆ, ಅದರಲ್ಲಿ ಹಲವರು ರಾಜಿ ಮಾಡಿಕೊಂಡು ಏನಾಯಿತು ಎಂದು ಕೇಳಿದರೆ ಉತ್ತರ ಕೊಡಬೇಕಾದೀತು ಎಂದು ನನ್ನ ಬಾಗಿಲಿಗೆ ಬರುವುದು ಬಿಟ್ಟರು. ನನ್ನೊಬ್ಬನಿಂದ ಸಾದ್ಯವಾಗದ್ದು ಇವರೆಲ್ಲ ಮಾಡುತ್ತಿದ್ದಾರೆ ಎಂದು ಸಂತೋಷವೇನೋ ಪಟ್ಟಿದ್ದೆ, ಆದರೆ ಅವರು ಮಾಡಿದ್ದು ಬ್ರಷ್ಟ ಕೆಲಸ ಎಂದು ತಿಳಿದು ಮನದಲ್ಲಿ ನೊಂದುಕೊಳ್ಳುವುದೊಂದೇ ಎನಗೆ ಉಳಿದದ್ದು. ಅನೇಕರು ಜಮೀನು ಮಾಡಿಕೊಂಡರು, ಕಾರು ತೆಗೆದುಕೊಂಡರು, ರಾಜಕಾರಣಿಗಳಾದರು, ಎನ್ನ ಸಮಾಜ ಸೇವೆಯನ್ನು ವಿರೋದಿಸುವ ವೈರಿಗಳಿಗೆ ಜಾಸೂಸುಗಳಾದರು ಆದರೆ ನಾನು ನನ್ನ ವೃತ್ತಿ ಬದುಕನ್ನು ಹಾಳು ಮಾಡಿಕೊಂಡೆ, ಕಾರೊಂದನ್ನು ಮಾರಿಕೊಂಡೆ, ಎನ್ನ ಮೈಮೇಲಿನ ವಡವೆಗಳನ್ನು ಮಾರಿಕೊಂಡೆ, ಎನಗೆ ಅನ್ನ ಹಾಕುತ್ತಿದ್ದ ಎನ್ನ ಮಡದಿಯ ನಿರ್ವಹಣೆಯಲ್ಲಿದ್ದ ಅಂಗಡಿಯೊಂದನ್ನು ಮಾರಿಕೊಂಡೆ. ಇದು ನಿಸ್ವಾರ್ಥತೆಗೆ ಸಿಕ್ಕ ಪ್ರತಿಪಲ ಎಂದು ಒಂದು ದಿನವೂ ಚಿಂತಿಸಲಿಲ್ಲ ಏಕೆಂದರೆ ದೇವರು ಯಾವುದಕ್ಕೂ ತೊಂದರೆ ನೀಡಲಿಲ್ಲ. ಇದ್ದಾಗ ಎಷ್ಟು ಖುಷಿಯಾಗಿ ಇದ್ದೆನೋ ಇಲ್ಲದಾಗ ಅಷ್ಟೇ ಖುಷಿಯಾಗಿರುವೆ. ಇಷ್ಟೆಲ್ಲಾ ಕಳೆದುಕೊಂಡದ್ದಕ್ಕೆ ಎಂದಿಗೂ ನೋವೆನಿಸಲಿಲ್ಲ, ಆದರೆ ಸ್ನೇಹಿತರಂತೆ ಪಕ್ಕದಲ್ಲಿ ಇದ್ದು ನನ್ನಿಂದ ಹಲವಾರು ಐಡಿಯಾಗಳನ್ನು ಪಡೆದು ತಮ್ಮ ಸ್ವಾರ್ಥಸೇವೆಗೆ ಮುಂದಾದರಲ್ಲ ಆಗ ತುಂಬಾ ನೋವಾಯಿತು. ಐಶ್ವರ್ಯಕ್ಕಿಂತಾ ಸ್ನೇಹ, ನಂಬಿಕೆ, ನಿಸ್ವಾರ್ಥತೆ, ಮತ್ತು ಸೇವೆ ಹಿರಿದು ಎಂದು ಅರಿವಿಗೆ ಬರುವುದಕ್ಕೆ ನಾವು ಈ ರೀತಿಯಲ್ಲಿ ಮೋಸ ಹೋಗುವುದು ಜೀವನದಲ್ಲಿ ಅನಿವಾರ್ಯವೆ ಎಂಬ ಪ್ರಶ್ನೆ ಮನದಾಳದಲ್ಲಿ ಹರಿದು ಪ್ರಶ್ನೆಯಾಗೆ ಉಳಿಯಿತು.

ಎನ್. ಶ್ರೀಧರ ಬಾಬು
ವಕೀಲರು
ತುಮಕೂರು
೯೮೮೦೩೩೯೭೬೪

CASE LAW ON LAND LAWS